HomeHealthಸಂಜೆಯ ಸಮಯಕ್ಕೆ ವಿಪರೀತವಾಗುವ ತಲೆನೋವಿಗೆ ಇಲ್ಲಿದೆ ಮದ್ದು....!

ಸಂಜೆಯ ಸಮಯಕ್ಕೆ ವಿಪರೀತವಾಗುವ ತಲೆನೋವಿಗೆ ಇಲ್ಲಿದೆ ಮದ್ದು….!

ತಲೆನೋವಿಗೆ ಕಾರಣಗಳು ಹಾಗೂ ಪರಿಹಾರಗಳು | Kannada | Blog Post by Dr. Amod Manocha | ಮೊಮ್ಸ್ಪ್ರೆಸೊ

ಸಂಜೆಯಾದಂತೆ ಹೆಚ್ಚುವ ತಲೆನೋವು ವಿಪರೀತ ಸುಸ್ತಿನ ಲಕ್ಷಣ. ಯಾವುದೇ ವಿಷಯವನ್ನು ಅತಿಯಾಗಿ ಹಚ್ಚಿಕೊಂಡು ತಲೆಬಿಸಿ ಮಾಡಿಕೊಂಡರೂ ತಲೆನೋವು ಕಾಣಿಸಿಕೊಳ್ಳುತ್ತದೆ. ಇದರ ಪರಿಹಾರಕ್ಕೆ ಹೀಗೆ ಮಾಡಿ.

ತಲೆಗೆ ಹರಳೆಣ್ಣೆ ಅಥವಾ ಎಳ್ಳೆಣ್ಣೆ ಹಾಕಿ ಮಸಾಜ್ ಮಾಡಿ. ಇದರಿಂದ ತಲೆ ರಿಲ್ಯಾಕ್ಸ್ ಆಗುತ್ತದೆ. ಮನಸ್ಸಿಗೆ ಮುದ ನೀಡುವ ಹಾಡುಗಳನ್ನು ಕೇಳಿ. ಕಿರಿಕಿರಿ ಮಾಡುವ ವಸ್ತು ಹಾಗೂ ವ್ಯಕ್ತಿಗಳಿಂದ ದೂರವಿರಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಣ್ಣ ತಲೆನೋವಿಗೆ ಮಾತ್ರೆಯ ಮೊರೆ ಹೋಗದಿರಿ. ಬಿಸಿನೀರಿಗೆ ಚಿಟಿಕೆ ಉಪ್ಪು ಬೆರೆಸಿ ಗಳಗಳನೆ ಕುಡಿಯಿರಿ. ಐಸ್ ನಿಂದ ಹಣೆಯ ಮುಂಭಾಗಕ್ಕೆ ಮಸಾಜ್ ಮಾಡಿ. ವಿಶ್ರಾಂತಿ ತೆಗೆದುಕೊಳ್ಳಿ. ಎಲ್ಲಾ ಕೆಲಸಗಳನ್ನು ಬದಿಗೊತ್ತಿ ಆರಾಮಾಗಿ ನಿದ್ದೆ ಮಾಡಿ. ಮರುದಿನ ಎದ್ದಾಗ ತಲೆನೋವು ಮಾಯವಾಗಿರುತ್ತದೆ.

ಶುಂಠಿ ಹಾಗೂ ನಿಂಬೆರಸ ಬೆರೆಸಿ ಕುಡಿಯುವುದರಿಂದಲೂ ತಲೆನೋವು ದೂರವಾಗುತ್ತದೆ. ಮಸಾಲೆ ಚಹಾ ತಯಾರಿಸಿ ಕುಡಿದರೆ ಶೀತಕ್ಕೆ ಸಂಬಂಧಿಸಿದಂತೆ ತಲೆನೋವು ಕಾಡುತ್ತಿದ್ದರೆ ಅದೂ ದೂರವಾಗುತ್ತದೆ. ಪುದಿನಾ ರಸವನ್ನು ತಲೆಗೆ ಸವರಿಕೊಂಡರೂ ತಲೆನೋವಿನ ತೀವ್ರತೆ ಕಡಿಮೆಯಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular