ಹವಾಮಾನ ಬದಲಾದಾಗ, ಬೇರೆ ಊರಿನ ನೀರು ಕುಡಿದಾಗ ಶೀತವಾಗುವ ಲಕ್ಷಣವಾಗಿ ಮೊದಲಿಗೆ ಗಂಟಲು ನೋವು ಕಾಣಿಸಿಕೊಳ್ಳುತ್ತದೆ. ಇದರ ನಿವಾರಣೆಗೆ ಕೆಲವು ಮನೆಮದ್ದುಗಳಿವೆ.
ಕಡ್ಡಾಯವಾಗಿ ತಣ್ಣಗಿನ ನೀರು ಅಥವಾ ಇತರ ಪಾನೀಯಗಳನ್ನು ಒಂದೆರಡು ದಿನ ಸೇವಿಸದಿರಿ. ಸಾಧ್ಯವಾದಷ್ಟು ಬಿಸಿ ಚಹಾ, ನೀರು, ಉಪಹಾರ, ಊಟ ತಿನ್ನಿ.
ಒಂದು ಇಂಚು ಗಾತ್ರದ ಹಸಿ ಶುಂಠಿ ತುಂಡನ್ನು ನೀರಿಗೆ ಹಾಕಿ ಕುದಿಸಿ. ನಾಲ್ಕು ಕಾಳುಮೆಣಸು ಜಜ್ಜಿ ಹಾಕಿ. ಹತ್ತು ನಿಮಿಷ ಕುದಿಸಿ. ಕೆಳಗಿಳಿಸಿ ಸೋಸಿ. ಬಿಸಿ ಇರುವಂತೆಯೇ ಕುಡಿಯಿರಿ. ಕೆಲವೇ ಗಂಟೆಗಳಲ್ಲಿ ನಿಮ್ಮ ಗಂಟಲು ನೋವು ದೂರವಾಗುತ್ತದೆ.
ಇದಕ್ಕೆ ಚಿಟಿಕೆ ಅರಿಶಿನ ಹಾಕಿಯೂ ಸೇವಿಸಬಹುದು. ಸಿಹಿ ಬೇಕು ಎನ್ನುವವರು ಬೆಲ್ಲದ ಬದಲಿಗೆ ಒಂದು ಚಮಚ ಜೇನುತುಪ್ಪ ಹಾಕಿ ಕುಡಿಯಿರಿ. ಗಂಟಲು ನೋವು ಹಾಗೂ ಶೀತದ ಮತ್ತಿತರ ಲಕ್ಷಣಗಳು ಬಹುಬೇಗ ದೂರವಾಗುತ್ತವೆ. ರಾತ್ರಿ ಮಲಗುವ ಮುನ್ನ ಬೆಚ್ಚಗಿನ ಉಪ್ಪುನೀರಿನಿಂದ ಬಾಯಿ ಮುಕ್ಕಳಿಸಿದರೆ ಗಂಟಲು ನೋವು ಓಡಿ ಹೋಗುತ್ತದೆ.