HomeBeautyಮುಖದ ಕಾಳಜಿಗೆ ಸಮಯವಿಲ್ಲದಿದ್ದರೆ ರಾತ್ರಿ ಮಲಗುವಾಗ ಇದೊಂದನ್ನು ಹಚ್ಚಿ

ಮುಖದ ಕಾಳಜಿಗೆ ಸಮಯವಿಲ್ಲದಿದ್ದರೆ ರಾತ್ರಿ ಮಲಗುವಾಗ ಇದೊಂದನ್ನು ಹಚ್ಚಿ

ನಿಮಗೆ ದಿನವಿಡೀ ಮುಖದ ಕಾಳಜಿ ಮಾಡಲಾಗದಷ್ಟು ಕೆಲಸವಿರುತ್ತದೆಯೇ, ಹಾಗಾದರೆ ಇಲ್ಲಿ ಕೇಳಿ. ಈ ಕೆಲವು ಎಣ್ಣೆಗಳನ್ನು ರಾತ್ರಿ ಮಲಗುವ ಮುನ್ನ ಮುಖಕ್ಕೆ ಹಚ್ಚಿ ಮಲಗಿ, ಬೆಳಗ್ಗೆ ಎದ್ದಾಗ ಮ್ಯಾಜಿಕಲ್ ಬದಲಾವಣೆಯನ್ನು ನೀವೇ ನೋಡಿ.

ವಿಟಮಿನ್ ಸಿ ಎಣ್ಣೆಗೆ ಅಲೋವೇರಾ ಮತ್ತು ವಿಟಮಿನ್ ಇ ಎಣ್ಣೆ ಬೆರೆಸಿ. ಚೆನ್ನಾಗಿ ಮಿಶ್ರ ಮಾಡಿ. ಇದನ್ನು ರಾತ್ರಿ ಮಲಗುವ ಮುನ್ನ ನಿತ್ಯ ಹಚ್ಚಿಕೊಳ್ಳಿ. ಬೆಳಿಗ್ಗೆ ಎದ್ದಾಕ್ಷಣ ಲೈಟ್ ಸೋಪ್ ನಿಂದ ಮುಖ ತೊಳೆಯಿರಿ. ಕೆಲವೇ ದಿನಗಳಲ್ಲಿ ನಿಮ್ಮ ಮುಖ ಹೊಳೆಯುವುದನ್ನು ನೋಡಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಲೋವೇರಾ ಜೆಲ್ ಗೆ ರೋಸ್ ವಾಟರ್, ತೆಂಗಿನೆಣ್ಣೆ ಮತ್ತು ಬಾದಾಮಿ ಎಣ್ಣೆ ಬೆರೆಸಿ. ಗಾಜಿನ ಬಾಟಲ್ ನಲ್ಲಿ ಹಾಕಿಡಿ. ನಿತ್ಯ ರಾತ್ರಿ ಮಲಗುವ ಮುನ್ನ ಮುಖ ಕುತ್ತಿಗೆ ಹಾಗೂ ಕೈಗಳಿಗೆ ಹಚ್ಚಿಕೊಳ್ಳಿ. ಈ ಭಾಗದಲ್ಲಿರುವ ಕಲೆಗಳನ್ನು ಬಹುಬೇಗ ನಿವಾರಿಸುವ ಈ ಎಣ್ಣೆಯನ್ನು ಸಂಗ್ರಹಿಸಿಟ್ಟರೆ ಹದಿನೈದು ದಿನಗಳ ತನಕವೂ ಬಳಸಬಹುದು.

ಎಲ್ಲಾ ಬಗೆಯ ತ್ವಚೆ ಹೊಂದಿರುವವರೂ ಇದನ್ನು ಪ್ರಯತ್ನಿಸಿ ನೋಡಬಹುದು. ಕನಿಷ್ಠ ಒಂದು ತಿಂಗಳು ಬಳಸಿದರೆ ಸಾಕು ಅತ್ಯುತ್ತಮ ಪರಿಣಾಮದ ಅನುಭವ ನಿಮಗಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular