HomeBeautyಮನೆಯಲ್ಲಿಯೇ ತಯಾರಿಸಿ ನೈಸರ್ಗಿಕವಾದ ಸನ್ ಸ್ಕ್ರೀನ್

ಮನೆಯಲ್ಲಿಯೇ ತಯಾರಿಸಿ ನೈಸರ್ಗಿಕವಾದ ಸನ್ ಸ್ಕ್ರೀನ್

ನಿಮ್ಮ ಚರ್ಮವನ್ನು ಸೂರ್ಯನ ಕಿರಣಗಳಿಂದ ರಕ್ಷಿಸಿಕೊಳ್ಳುವುದು ಅತಿ ಅವಶ್ಯಕ. ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್ ಯುಕ್ತ ಕ್ರೀಂಗಳನ್ನು ಹಚ್ಚುವುದರಿಂದ ಇನ್ನಷ್ಟು ಹಾನಿಯಾಗುತ್ತದೆ. ಆದ ಕಾರಣ ಸೂರ್ಯ ಕಿರಣಗಳಿಂದ ನಿಮ್ಮ ಚರ್ಮವನ್ನು ರಕ್ಷಿಸಲು ನೈಸರ್ಗಿಕವಾದ ಈ ವಸ್ತುಗಳನ್ನು ಹಚ್ಚಿ.

¼ ಕಪ್ ತೆಂಗಿನೆಣ್ಣೆ, ¼ ಕಪ್ ಶಿಯಾ ಬಟರ್, 2 ಚಮಚ ಎಳ್ಳೆಣ್ಣೆ, 2 ಚಮಚ ಜೇನಿನ ಮೇಣ ವನ್ನು ತೆಗೆದುಕೊಂಡು ಇವಿಷ್ಟನ್ನು ಡಬಲ್ ಬಾಯ್ಲರ್ ನಲ್ಲಿ ಕರಗಿಸಿ. ಬಳಿಕ ಅದನ್ನು ತಣ್ಣಗಾಗಿಸಿ 15 ನಿಮಿಷ ಫ್ರಿಜರ್ ನಲ್ಲಿ ಇಡಿ. ಆನಂತರ ಇದಕ್ಕೆ 1 ಚಮಚ ರೆಡ್ ರಾಸ್ಪ್ಬೆರಿ ಬೀಜದ ಎಣ್ಣೆ, 1 ಚಮಚ ಕ್ಯಾರೆಟ್ ಬೀಜದ ಎಣ್ಣೆ, 1 ಚಮಚ ಲ್ಯಾವೆಂಡರ್ ಆಯಿಲ್ ನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ಹೊರಗೆ ಹೋಗುವಾಗ ಚರ್ಮಕ್ಕೆ ಹಚ್ಚಿದರೆ ಸೂರ್ಯ ಬಿಸಿಲಿನ ಪ್ರಭಾವ ನಿಮ್ಮ ಚರ್ಮದ ಮೇಲಾಗುವುದಿಲ್ಲ.

For Latest News Updates, Join Our Whatsapp Community🚩
RELATED ARTICLES

Most Popular