HomeLatest Newsಮನೆಯಲ್ಲಿಯೇ ಸುಲಭವಾಗಿ ಮಾಡಿ ‘ಅಕ್ಕಿ ಹಿಟ್ಟು’

ಮನೆಯಲ್ಲಿಯೇ ಸುಲಭವಾಗಿ ಮಾಡಿ ‘ಅಕ್ಕಿ ಹಿಟ್ಟು’

ಅಕ್ಕಿ ಹಿಟ್ಟು ಬಳಸಿ ನಾನಾಬಗೆಯ ತಿಂಡಿಗಳನ್ನು ಮಾಡುತ್ತೇವೆ. ಇದನ್ನು ಹೊರಗಡೆ ತಂದು ಉಪಯೋಗಿಸುವುದಕ್ಕಿಂತ ಮನೆಯಲ್ಲಿಯೇ ಸುಲಭವಾಗಿ ಮಾಡಿಕೊಳ್ಳಬಹುದು. ಮಾಡುವ ವಿಧಾನ ಇಲ್ಲಿದೆ ನೋಡಿ.

2 ಕಪ್ ನಷ್ಟು ಅಕ್ಕಿಯನ್ನು ತೆಗೆದುಕೊಂಡು ತೊಳೆದು 2 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ನಂತರ ಇದರ ನೀರು ಬಸಿದುಕೊಂಡು ಮತ್ತೊಮ್ಮೆ ಅಕ್ಕಿಯನ್ನು ತೊಳೆದುಕೊಳ್ಳಿ. ಒಂದು ತೆಳುವಾದ ಬಿಳಿ ಕಾಟನ್ ಬಟ್ಟೆಯನ್ನು ಹಾಸಿ ನೆರಳಿನಲ್ಲಿ 45 ನಿಮಿಷಗಳ ಕಾಲ ಒಣಗಿಸಿ. ಇದು ಪೂರ್ತಿಯಾಗಿ ಒಣಗುವುದು ಬೇಡ. ಕೈಗೆ ಅಕ್ಕಿ ಕಾಳುಗಳು ತುಸು ಅಂಟಿಕೊಂಡು ಕೆಳಗೆ ಬೀಳುವ ರೀತಿ ಇರಲಿ. ಇದರಲ್ಲಿ ಸ್ವಲ್ಪ ಮಟ್ಟಿನ ತೇವಾಂಶ ಇರಬೇಕು.

ನಂತರ ಇದನ್ನು ಮಿಕ್ಸಿ ಜಾರಿಗೆ ಹಾಕಿ ನಯವಾಗಿ ಪುಡಿಮಾಡಿಕೊಂಡು ಜರಡಿ ಹಿಡಿದುಕೊಂಡರೆ ನಯವಾದ ಅಕ್ಕಿ ಹಿಟ್ಟು ಮನೆಯಲ್ಲಿಯೇ ಸಿದ್ಧವಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular