ತ್ವಚೆಯ ಕಾಳಜಿ ವಿಷಯಕ್ಕೆ ಬಂದರೆ ಮಹಿಳೆಯರಷ್ಟೇ ಪುರುಷರೂ ತ್ವಚೆಯ ಆರೈಕೆಗೆ ಮಹತ್ವ ನೀಡಬೇಕಾಗುತ್ತದೆ. ಇಂದಿನ ಅಧುನಿಕ ಜಗತ್ತಿನಲ್ಲಿ ಪುರುಷರು ಸೌಂದರ್ಯ ಪ್ರಜ್ಞೆಯ ಕುರಿತು ಆಲೋಚಿಸುತ್ತಾರೆ ಹಾಗೂ ಅದಕ್ಕಾಗಿ ಹೆಚ್ಚಿನ ಸಮಯ ವಿನಿಯೋಗಿಸುತ್ತಾರೆ.
ಬ್ಲಾಕ್ ಹೆಡ್, ವೈಟ್ ಹೆಡ್ ಮತ್ತು ಸತ್ತ ಜೀವಕೋಶಗಳು ನಿಮ್ಮ ತ್ವಚೆಯನ್ನು ಗಡುಸಾಗಿ ಕಾಣುವಂತೆ ಮಾಡಬಹುದು. ಇದನ್ನು ಮೃದುವಾಗಿಸಲು ಒಂದಷ್ಟು ಫೇಸ್ ಸ್ಕ್ರಬ್ ಗಳನ್ನು ಬಳಸಿ.
ಫೇಸ್ ವಾಶ್ ಬಳಸಿ ನೀವು ಮುಖ ತೊಳೆಯುತ್ತಿದ್ದರೂ ಅವು ಚರ್ಮದ ಆಳದ ಕೊಳೆ ಮತ್ತು ಡೆಡ್ ಸೆಲ್ಸ್ ಗಳನ್ನು ತೆಗೆದು ಹಾಕುವುದಿಲ್ಲ. ಗಡ್ಡ ತೆಗೆಯುತ್ತಾ ಇರುವುದರಿಂದ ಉಂಟಾಗುವ ಗಡಸುತನ, ಗಾಯ, ಶೇವಿಂಗ್ ಕ್ರೀಮ್ ಗಳ ಅಡ್ಡ ಪರಿಣಾಮ ತಡೆಯಲು ಸ್ಕ್ರಬ್ ಗಳನ್ನು ಆಗಾಗ ಬಳಸುತ್ತಿರುವುದು ಒಳ್ಳೆಯದು. ಇದು ರೇಜರ್ನಿಂದಾದ ಸಮಸ್ಯೆಯನ್ನೂ ದೂರ ಮಾಡುತ್ತದೆ.
ಈಗಾಗಲೇ ಮೊಡವೆ ಮೂಡಿದ್ದರೆ ಅದರ ಕಲೆಯನ್ನು ಹೋಗಲಾಡಿಸುತ್ತದೆ ಮತ್ತು ಮೊಡವೆ ಮೂಡದಂತೆ ನೋಡಿಕೊಳ್ಳುತ್ತದೆ. ಹಾಗೆಂದು ಸ್ಕ್ರಬ್ ನಿತ್ಯ ಬಳಸಬಾರದು. ವಾರಕ್ಕೊಮ್ಮೆ ಅಥವಾ ಹತ್ತು ದಿನಕ್ಕೊಮ್ಮೆ ಸ್ಕ್ರಬ್ ಹಚ್ಚಿ ಬಳಿಕ ಮುಖ ಸ್ವಚ್ಛಗೊಳಿಸಿದರೆ ಸಾಕು.