ರಾತ್ರಿ ಹೆಚ್ಚು ಊಟ ಮಾಡಿದರೆ ತೂಕ ಏರುತ್ತದೆ ಎಂಬ ಭಯ ಇರುತ್ತದೆ. ಹಾಗಂತ ಸ್ವಲ್ಪ ಊಟ ಮಾಡಿದರೆ ಮತ್ತೆ ಹಸಿವಾಗುತ್ತದೆ ಎಂಬ ಚಿಂತೆ.
ಹಾಗಿದ್ದವರು ರುಚಿಕರ ಹಾಗೂ ಆರೋಗ್ಯಕರವಾದ ಕ್ಯಾರೆಟ್, ಪಾಲಕ್ ಸೂಪ್ ಮಾಡಿಕೊಂಡು ಸವಿಯಿರಿ.
ಬೇಕಾಗುವ ಸಾಮಗ್ರಿಗಳು:
ಪಾಲಕ್ – 6 ಎಲೆ, ಕ್ಯಾರೆಟ್ – 1, 1 ಕಪ್ – ಹಾಲು, 2 ಕಪ್ –ನೀರು, ಸ್ಪ್ರಿಂಗ್ ಆನಿಯನ್ – 1, 1 ಟೇಬಲ್ ಸ್ಪೂನ್ – ಕಾರ್ನ್ ಫ್ಲೋರ್, ¼ ಕಪ್ ತುರಿದ ಚೀಸ್, ಕಾಳುಮೆಣಸಿನ ಪುಡಿ – ರುಚಿಗೆ ತಕ್ಕಷ್ಟು, ಉಪ್ಪು – ರುಚಿಗೆ ತಕ್ಕಷ್ಟು.
ಮಾಡುವ ವಿಧಾನ:
ಮೊದಲಿಗೆ ಪಾಲಾಕ್ ಹಾಗೂ ಸ್ಪ್ರಿಂಗ್ ಆನಿಯನ್ ಅನ್ನು ಕತ್ತರಿಸಿ ಬೇರೆ ಬೇರೆಯಾಗಿ ಇಟ್ಟುಕೊಳ್ಳಿ. ಹಾಗೇ ಕ್ಯಾರೆಟ್ ಅನ್ನು ತುರಿದಿಟ್ಟುಕೊಳ್ಳಿ. ಒಂದು ಪ್ಯಾನ್ ಗೆ ಹಾಲು, ಕಾರ್ನ್ ಫ್ಲೋರ್, ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಸ್ಪ್ರಿಂಗ್ ಆನಿಯನ್, ಪಾಲಾಕ್, ಕ್ಯಾರೆಟ್ ಹಾಕಿ ಮಿಕ್ಸ್ ಮಾಡಿ ಹದ ಉರಿಯಲ್ಲಿ 5 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
ಯಾವುದೇ ಕಾರಣಕ್ಕೂ ತಳಹತ್ತದಂತೆ ಕೈಯಾಡಿಸುತ್ತಲೇ ಇರಿ. ನಂತರ ಇದಕ್ಕೆ ಚೀಸ್, ಉಪ್ಪು, ಕಾಳುಮೆಣಸಿಪುಡಿ ಸೇರಿಸಿ ಮಿಕ್ಸ್ ಮಾಡಿ ಗ್ಯಾಸ್ ಆಫ್ ಮಾಡಿ. ಬಿಸಿ ಬಿಸಿ ಸರ್ವ್ ಮಾಡಿ.