HomeRecipiesರಾಜಸ್ತಾನಿ ಶೈಲಿಯ ‘ಹಸಿಮೆಣಸಿನ ಉಪ್ಪಿನಕಾಯಿ’ ರುಚಿ ನೋಡಿದ್ದೀರಾ…?

ರಾಜಸ್ತಾನಿ ಶೈಲಿಯ ‘ಹಸಿಮೆಣಸಿನ ಉಪ್ಪಿನಕಾಯಿ’ ರುಚಿ ನೋಡಿದ್ದೀರಾ…?

ಊಟದ ಜತೆ ಉಪ್ಪಿನಕಾಯಿ ಇದ್ದರೆ ಅದರ ರುಚಿನೇ ಬೇರೆ. ಇಲ್ಲಿ ರಾಜಸ್ತಾನಿ ಶೈಲಿಯ ಹಸಿಮೆಣಸಿನಕಾಯಿ ಬಳಸಿ ಮಾಡುವ ಉಪ್ಪಿನಕಾಯಿ ಇದೆ. ಒಮ್ಮೆ ಮಾಡಿ ರುಚಿ ನೋಡಿ.

ಬೇಕಾಗುವ ಸಾಮಗ್ರಿಗಳು:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

1 ½ ಕಪ್ ನಷ್ಟು ಬೀಜ ತೆಗೆದು ಸಣ್ಣಗೆ ಹೆಚ್ಚಿಟ್ಟುಕೊಂಡ ಹಸಿಮೆಣಸು, ಎಣ್ಣೆ – 2 ಟೇಬಲ್ ಸ್ಪೂನ್, ಸೋಂಪು – 1 ಟೇಬಲ್ ಸ್ಪೂನ್, ಸಾಸಿವೆ – 1 ಟೀ ಸ್ಪೂನ್, ಜೀರಿಗೆ – 1 ಟೀ ಸ್ಪೂನ್, ಅರಿಶಿನ ಪುಡಿ – 1/4 ಟೀ ಸ್ಪೂನ್, ಉಪ್ಪು – ರುಚಿಗೆ ತಕ್ಕಷ್ಟು, ಧನಿಯಾ ಪುಡಿ – 1 ಟೇಬಲ್ ಸ್ಪೂನ್, ಖಾರದ ಪುಡಿ – ಚಿಟಿಕೆ, ನೀರು – 2 ಟೇಬಲ್ ಸ್ಪೂನ್, ಇಂಗು – 1/4 ಟೀ ಸ್ಪೂನ್.

ಮಾಡುವ ವಿಧಾನ:

ಮೊದಲು ಒಂದು ಪ್ಯಾನ್ ಗೆ ಎಣ್ಣೆ ಹಾಕಿಕೊಂಡು ಬಿಸಿ ಮಾಡಿ. ಅದಕ್ಕೆ ಇಂಗು, ಸಾಸಿವೆ, ಜೀರಿಗೆ ಹಾಗೂ ಸೋಂಪು ಹಾಕಿ ಇದು ಫ್ರೈ ಆದ ಕೂಡಲೆ ಹಸಿಮೆಣಸು ಸೇರಿಸಿ 5 ನಿಮಿಷಗಳ ಕಾಲ ಫ್ರೈ ಮಾಡಿ. ನಂತರ ಅರಿಶಿನ, ಉಪ್ಪು, ಧನಿಯಾ ಪುಡಿ, ಖಾರದ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ 1 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.

ಇದಕ್ಕೆ ನೀರು ಸೇರಿಸಿ 2 ನಿಮಿಷಗಳ ಕಾಲ ಮತ್ತೆ ಬೇಯಿಸಿಕೊಂಡು ಗ್ಯಾಸ್ ಆಫ್ ಮಾಡಿದರೆ ಥಟ್ಟಂತ ರೆಡಿಯಾಗುತ್ತೆ ಹಸಿಮೆಣಸಿನಕಾಯಿ ಉಪ್ಪಿನಕಾಯಿ. ಇದು ಸೈಡ್ ಡಿಶ್ ಗೆ ಚೆನ್ನಾಗಿರುತ್ತದೆ. ಫ್ರಿಡ್ಜ್ ನಲ್ಲಿ 5-6 ದಿನಗಳ ಕಾಲ ಇಡಬಹುದು.

For Latest News Updates, Join Our Whatsapp Community🚩
RELATED ARTICLES

Most Popular