ಸಂಜೆ ಟೀ ಜತೆಗೆ ಸ್ಯಾಂಡ್ ವಿಚ್ ಇದ್ದರೆ ಅದರ ಮಜಾನೇ ಬೇರೆ. ಇಲ್ಲಿ ಸುಲಭವಾಗಿ ಮಾಡುವ ಚಾಕೋಲೆಟ್ ಸ್ಯಾಂಡ್ ವಿಚ್ ರೆಸಿಪಿ ಇದೆ. ಮನೆಯಲ್ಲಿ ಮಾಡಿ. ಮಕ್ಕಳಿಗೂ ತುಂಬಾ ಇಷ್ಟವಾಗುತ್ತೆ.
ಬ್ರೇಡ್-4 ಸ್ಲೈಸ್, ಚಾಕೋಚಿಪ್ಸ್-2 ಟೇಬಲ್ ಸ್ಪೂನ್, ಬೆಣ್ಣೆ-2 ಟೇಬಲ್ ಸ್ಪೂನ್. ಚಾಕೋಚಿಪ್ಸ್ ಇಲ್ಲದಿದ್ದರೆ ಡಾರ್ಕ್ ಚಾಕೋಲೆಟ್ ಅನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ.
ಮೊದಲಿಗೆ ಬ್ರೆಡ್ ಗೆ ಬೆಣ್ಣೆಯನ್ನು ಒಂದು ಚಾಕುವಿನ ಸಹಾಯದಿಂದ ಎಲ್ಲಾ ಕಡೆ ಚೆನ್ನಾಗಿ ಹಚ್ಚಿ. ಗ್ಯಾಸ್ ಮೇಲೆ ಪ್ಯಾನ್ ಇಟ್ಟು ಅದಕ್ಕೆ ಸ್ವಲ್ಪ ಬೆಣ್ಣೆ ಹಾಕಿ. ಅದು ಕರಗಿದ ಮೇಲೆ ಪ್ಯಾನ್ ಮೇಲೆ 2 ಪೀಸ್ ಬ್ರೆಡ್ ಇಟ್ಟು ಅದರ ಮೇಲೆ ಚಾಕೋಚಿಪ್ಸ್ ಅನ್ನು ಹಾಕಿ ಇನ್ನೊಂದು ಬ್ರೆಡ್ ಅದರ ಮೇಲೆ ಇಟ್ಟು ಬೆಣ್ಣೆ ಹಚ್ಚಿ.
ಸಣ್ಣ ಉರಿಯಲ್ಲಿ ಎರಡೂ ಕಡೆ ಚೆನ್ನಾಗಿ ರೋಸ್ಟ್ ಮಾಡಿಕೊಳ್ಳಿ. ಟೀ – ಕಾಫಿ ಜತೆ ಸವಿಯಲು ಚೆನ್ನಾಗಿರುತ್ತದೆ. ಚಾಕೋಲೆಟ್ ಚಿಪ್ಸ್ ಹಾಕಿರುವುದರಿಂದ ಮಕ್ಕಳು ಇಷ್ಟಪಟ್ಟು ತಿನ್ನುತ್ತಾರೆ. ಸಂಜೆಯ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಇದು.