HomeHealthಬೆಳ್ಳುಳ್ಳಿ ತಿನ್ನುವುದರಿಂದ ಇದೆ ಈ 'ಆರೋಗ್ಯ' ಪ್ರಯೋಜನ

ಬೆಳ್ಳುಳ್ಳಿ ತಿನ್ನುವುದರಿಂದ ಇದೆ ಈ ‘ಆರೋಗ್ಯ’ ಪ್ರಯೋಜನ

ಬೆಳ್ಳುಳ್ಳಿ ವಾಸನೆ ಎಂದು ಮೂಗು ಮುರಿಯುತ್ತಾರೆ ಕೆಲವರು. ಇನ್ನು ಕೆಲವರಿಗಂತೂ ಬೆಳ್ಳುಳ್ಳಿ ಕಂಡರಾಗದು.

ಆದರೆ ಬೆಳ್ಳುಳ್ಳಿ ಆರೋಗ್ಯಕ್ಕೆ ಸಾಕಷ್ಟು ಒಳ್ಳೆಯದು ಎಂದು ಅನೇಕರಿಗೆ ಗೊತ್ತಿಲ್ಲ. ಅಡುಗೆಯಲ್ಲಿ ಬಳಸುವ ಬೆಳ್ಳುಳ್ಳಿ ದೇಹದ ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದಿನ ಒಂದು ಸೇಬು ತಿನ್ನುವ ಮೂಲಕ ವೈದ್ಯರಿಂದ ದೂರವಿರಿ ಎಂದು ಹೇಳುವ ರೀತಿಯಲ್ಲೇ ಬೆಳ್ಳುಳ್ಳಿ ಬಳಸಿ ಅನಾರೋಗ್ಯ ಸಮಸ್ಯೆಗಳಿಂದ ಮುಕ್ತರಾಗಿರಿ ಎಂದು ಹೇಳುತ್ತಾರೆ ಇದರ ಮಹತ್ವ ತಿಳಿದವರು.

ಪ್ರತಿದಿನ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಮೂರು ಎಸಳು ಬೆಳ್ಳುಳ್ಳಿಯನ್ನು ಅದಾಗದಿದ್ದರೆ ಅರ್ಧ ಎಸಳು ಮಾಡಿಕೊಂಡು ನುಂಗುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ರಕ್ತ ಶುದ್ಧಿಯಾಗುತ್ತದೆ. ಮುಖದ ಮೇಲಿರುವ ಮೊಡವೆ, ಅದರ ಕಲೆಗಳು ಮಾಯವಾಗುತ್ತವೆ. ಮಾತ್ರವಲ್ಲ, ಇದರಿಂದ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಕೂಡ ದೂರವಾಗುತ್ತವೆ.

ಅಸಿಡಿಟಿ, ಅಲರ್ಜಿಯಂತಹ ಸಮಸ್ಯೆಗಳಿಗೆ ಬೆಳ್ಳುಳ್ಳಿ ಒಳ್ಳೆಯದು. ಆದರೆ ತುಂಬಾ ಬೆವರುವವರು ಕಡಿಮೆ ಪ್ರಮಾಣದಲ್ಲಿ ಬೆಳ್ಳುಳ್ಳಿ ಬಳಸಬೇಕು. ಜಾಸ್ತಿ ತಿಂದರೆ, ಬೆವರು ದುರ್ಗ೦ಧಮಯವಾಗುತ್ತದೆ. ಬೆಳ್ಳುಳ್ಳಿಯಲ್ಲಿ ಪ್ರೋಟೀನ್, ವಿಟಮಿನ್ ಎ,ಬಿ,ಸಿ ಸೇರಿದಂತೆ ಹಲವು ಪೌಷ್ಟಿಕಾಂಶಗಳಿವೆ. ಹಾಲಿನಲ್ಲಿ ಬೆಳ್ಳುಳ್ಳಿ ಹಾಕಿ ಕುದಿಸಿ ಬಾಣಂತಿಯರಿಗೆ ಕೊಟ್ಟರೆ ಎದೆ ಹಾಲು ಹೆಚ್ಚುತ್ತದೆ. ಬೆಳ್ಳುಳ್ಳಿ ಹಾಕಿ ಕುದಿಸಿದ ಎಣ್ಣೆ ಹಚ್ಚುವುದರಿಂದ ಕಾಲು ನೋವು ಕಡಿಮೆಯಾಗುತ್ತದೆ. ಅಲ್ಲದೇ ಬೆಳ್ಳುಳ್ಳಿಯನ್ನು ಬಳಸುವುದರಿಂದ ಹಲವು ರೋಗಗಳು ಹತ್ತಿರ ಬರುವುದಿಲ್ಲ ಎನ್ನುತ್ತಾರೆ ಬಲ್ಲವರು.

For Latest News Updates, Join Our Whatsapp Community🚩
RELATED ARTICLES

Most Popular