alex Certify ಪ್ರತಿ ದಿನ ಇಷ್ಟು ಬಾದಾಮಿ ಸೇವಿಸಿದ್ರೆ ಹತ್ತಿರ ಬರಲ್ಲ ‘ಕ್ಯಾನ್ಸರ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿ ದಿನ ಇಷ್ಟು ಬಾದಾಮಿ ಸೇವಿಸಿದ್ರೆ ಹತ್ತಿರ ಬರಲ್ಲ ‘ಕ್ಯಾನ್ಸರ್’

ಒಣ ಹಣ್ಣುಗಳಲ್ಲಿ ಬಾದಾಮಿ ಪ್ರಾಮುಖ್ಯತೆ ಪಡೆದಿದೆ. ಪ್ರತಿದಿನ 20 ಗ್ರಾಂ ಬಾದಾಮಿ ತಿನ್ನುವುದರಿಂದ ಕ್ಯಾನ್ಸರ್, ಹೃದ್ರೋಗ ಸೇರಿದಂತೆ ಅನೇಕ ಕಾಯಿಲೆಗಳನ್ನು ತಡೆಯಬಹುದು.

ಸಂಶೋಧನೆಯ ಪ್ರಕಾರ, ಪ್ರತಿದಿನ ಬೆರಳೆಣಿಕೆಯಷ್ಟು ಬಾದಾಮಿ ತಿನ್ನುವುದರಿಂದ ಜನರಲ್ಲಿ ಹೃದ್ರೋಗಗಳ ಅಪಾಯವು ಸುಮಾರು ಶೇಕಡಾ 30ರಷ್ಟು ಕಡಿಮೆಯಾಗುತ್ತದೆ. ಇದು ಕ್ಯಾನ್ಸರ್ ಅಪಾಯವನ್ನು ಶೇಕಡಾ 15 ರಷ್ಟು ಮತ್ತು ಅಕಾಲಿಕ ಮರಣದ ಅಪಾಯವನ್ನು ಶೇಕಡಾ 22 ರಷ್ಟು ಕಡಿಮೆ ಮಾಡುತ್ತದೆ.

ಸಂಶೋಧಕರ ಪ್ರಕಾರ, ಬಾದಾಮಿಯಲ್ಲಿ ಫೈಬರ್, ಮೆಗ್ನೀಸಿಯಮ್ ಅಧಿಕವಾಗಿದೆ. ಪೋಷಕಾಂಶಗಳು ಹೃದ್ರೋಗಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್ ಮಟ್ಟವೂ ಕಡಿಮೆಯಾಗುತ್ತದೆ. ಬಾದಾಮಿ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪ್ರತಿದಿನ ಸರಾಸರಿ 20 ಗ್ರಾಂ ಗಿಂತ ಹೆಚ್ಚು ಬಾದಾಮಿ ತೆಗೆದುಕೊಳ್ಳುವ ಜನರು ತಮ್ಮ ಆರೋಗ್ಯದಲ್ಲಿ ಸ್ಥಿರವಾದ ಸುಧಾರಣೆಯನ್ನು ಕಂಡಿದ್ದಾರೆ. ತೂಕ ಇಳಿಸಿಕೊಳ್ಳಲು ಬಾದಾಮಿ ಪ್ರಯೋಜನಕಾರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...