HomeBeautyಕಿರಿಕಿರಿ ಉಂಟುಮಾಡುವ ಮೂಗಿನೊಳಗಿನ ಮೊಡವೆಗೆ ಇಲ್ಲಿದೆ ʼಮನೆ ಮದ್ದುʼ

ಕಿರಿಕಿರಿ ಉಂಟುಮಾಡುವ ಮೂಗಿನೊಳಗಿನ ಮೊಡವೆಗೆ ಇಲ್ಲಿದೆ ʼಮನೆ ಮದ್ದುʼ

ಮೊಡವೆಯೇ ಕಿರಿಕಿರಿ. ಹೀಗಿರುವಾಗ ಅದು ಮೂಗಿನೊಳಗೆ ಹೋಗಿ ಸೇರಿಕೊಂಡರೆ. ಹೇಗಿರಬೇಡ. ಇದು ನೀಡುವ ನೋವಿನ ಪ್ರಮಾಣ ಮಾತ್ರ ಅಗಾಧ.

ಮೂಗಿನ ಮೇಲೆ ಬೆಚ್ಚಗಿನ ಶಾಖ ನೀಡುವುದರಿಂದ ರಕ್ತ ಪರಿಚಲನೆ ಹೆಚ್ಚುತ್ತದೆ ಮತ್ತು ಪೀಡಿತ ಪ್ರದೇಶದಲ್ಲಿ ಉರಿಯೂತ ಕಡಿಮೆ ಮಾಡುತ್ತದೆ.

ರೋಸ್ಮೆರಿ ಎಣ್ಣೆಗೆ ನೋವು ನಿವಾರಕ ಗುಣವಿದೆ. ಇದು ಅಂಟಿ ಮೈಕ್ರೊಬಿಯಲ್, ಅಂಟಿ ಅಕ್ಸಿಡೆಂಟ್, ನಂಜು ನಿರೋಧಕ ಮತ್ತು ಶಿಲೀಂಧ್ರ ನಾಶಕ ಗುಣವನ್ನು ಹೊಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದರ ಎರಡು ಹನಿಗೆ ಐದು ಹನಿ ತೆಂಗಿನೆಣ್ಣೆ ಬೆರೆಸಿ ಮೊಡವೆಯಾದ ಸ್ಥಳಕ್ಕೆ ಹಚ್ಚಿ 30 ನಿಮಿಷದ ಬಳಿಕ ತೊಳೆಯಿರಿ. ರಾತ್ರಿ ಹಚ್ಚಿ ಮಲಗಿ ಬೆಳಗ್ಗೆ ತೊಳೆಯಿರಿ. ದಿನಕ್ಕೆರಡು ಬಾರಿ ಹೀಗೆ ಮಾಡಿ ನೋಡಿ.

ಬೇವಿನೆಣ್ಣೆಯನ್ನು ಬೆರಳಿನ ಸಹಾಯದಿಂದ ಮೊಡವೆ ಇರುವ ಭಾಗಕ್ಕೆ ಹಚ್ಚಿ. 30 ನಿಮಿಷ ಬಳಿಕ ತೊಳೆಯಿರಿ. ಇದನ್ನು ದಿನಕ್ಕೆ ಮೂರು ಬಾರಿ ಮಾಡಬಹುದು. ತೆಂಗಿನೆಣ್ಣೆ, ನಿಂಬೆ ಹಣ್ಣಿನ ರಸ, ಹೈಡ್ರೋಜನ್ ಪೆರಾಕ್ಸೈಡ್, ಅಪಲ್ ಸೈಡರ್ ವಿನೆಗರ್ ಅನ್ನು ಇದೇ ವಿಧಾನದಲ್ಲಿ ಬಳಸಬಹುದು.

For Latest News Updates, Join Our Whatsapp Community🚩
RELATED ARTICLES

Most Popular