HomeLatest Newsಇಲ್ಲಿದೆ ʼವೆಜ್ ಬಿರಿಯಾನಿʼ ಮಾಡುವ ವಿಧಾನ

ಇಲ್ಲಿದೆ ʼವೆಜ್ ಬಿರಿಯಾನಿʼ ಮಾಡುವ ವಿಧಾನ

ದಿನಾ ಸಾಂಬಾರು, ರಸಂ ತಿಂದು ಬೇಜಾರಾಗಿದ್ದರೆ ಒಮ್ಮೆ ಈ ವೆಜ್ ಬಿರಿಯಾನಿ ಮಾಡಿಕೊಂಡು ಸವಿಯಿರಿ. ಇದು ಮಾಡುವುದಕ್ಕೂ ಸುಲಭವಿದೆ. ಹಾಗೇಯೇ ರುಚಿ ಕೂಡ ಸಖತ್ ಆಗಿರುತ್ತದೆ.

ಬೇಕಾಗುವ ಸಾಮಗ್ರಿಗಳು:

ಕ್ಯಾರೆಟ್-2, ಬೀನ್ಸ್ -10, ಆಲೂಗಡ್ಡೆ-2, ಹಸಿಮೆಣಸು-4, ಮೊಸರು 1 ಕಪ್, ಪನ್ನೀರು-1/4 ಕಪ್, ಉಪ್ಪು, ರುಚಿಗೆ ತಕ್ಕಷ್ಟು, ಗರಂ ಮಸಾಲ-1 ಟೀ ಸ್ಪೂನ್, ಖಾರದ ಪುಡಿ-1 ಚಮಚ, ಧನಿಯಾ ಪುಡಿ-2 ಚಮಚ, ಬಿರಿಯಾನಿ ಮಸಾಲ-3 ಚಮಚ, ಚಿಟಿಕೆ ಅರಿಶಿನ, ಉಪ್ಪು-4 ಟೇಬಲ್ ಸ್ಪೂನ್, ಜೀರಿಗೆ-1 ಟೀ ಸ್ಪೂನ್, ಚಕ್ಕೆ-ಸಣ್ಣ ತುಂಡು, ಲವಂಗ-2, ಏಲಕ್ಕಿ-2, ಈರುಳ್ಳಿ-1 ಸಣ್ಣಗೆ ಹೆಚ್ಚಿಟ್ಟುಕೊಂಡಿದ್ದು, ಶುಂಠಿ, ಬೆಳ್ಳುಳ್ಳಿ ಪೇಸ್ಟ್-1 ಚಮಚ, ಪುದೀನಾ ಸ್ವಲ್ಪ, ಕೊತ್ತಂಬರಿಸೊಪ್ಪು ಸ್ವಲ್ಪ, ಅಕ್ಕಿ-2 ಕಪ್.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾಡುವ ವಿಧಾನ:

ಮೊದಲಿಗೆ ತರಕಾರಿಗಳನ್ನು ತೊಳೆದು ಸಣ್ಣಗೆ ಕತ್ತರಿಸಿಕೊಳ್ಳಿ. ನಂತರ ಪನ್ನಿರ್ ಅನ್ನು ಹೆಚ್ಚಿಟ್ಟುಕೊಳ್ಳಿ. ಒಂದು ಬೌಲ್ ಗೆ ½ ಕಪ್ ಮೊಸರು, ಖಾರದ ಪುಡಿ, ಗರಂ ಮಸಾಲ, ಬಿರಿಯಾನಿ ಪುಡಿ, ಸ್ವಲ್ಪ ಉಪ್ಪು, ಅರಿಶಿನ, ಜೀರಿಗೆ, ಧನಿಯಾ ಪುಡಿ 2 ಹಸಿಮೆಣಸು, ಸ್ವಲ್ಪ ಪುದೀನಾ, ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.

ನಂತರ ಇದಕ್ಕೆ ತರಕಾರಿ, ಪನ್ನೀರ್ ಹಾಕಿ ಮಿಕ್ಸ್ ಮಾಡಿ ½ ಗಂಟೆಗಳ ಕಾಲ ಹಾಗೇಯೇ ಬಿಡಿ. ಅಕ್ಕಿಯನ್ನು ತೊಳೆದು ಅರ್ಧ ಗಂಟೆಗಳ ಕಾಲ ನೆನೆಸಿಡಿ. ನಂತರ ಕುಕ್ಕರ್ ಗೆ ತುಪ್ಪ ಹಾಕಿ ಅದು ಬಿಸಿಯಾಗುತ್ತಲೆ, ಚಕ್ಕೆ, ಲವಂಗ, ಏಲಕ್ಕಿ ಹಾಕಿ. ನಂತರ ಈರುಳ್ಳಿ ಸೇರಿಸಿ ಫ್ರೈ ಮಾಡಿಕೊಳ್ಳಿ. ಶುಂಠಿ ಬೆಳ್ಳುಳ್ಳಿ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಹುರಿದುಕೊಳ್ಳಿ. ಮ್ಯಾರಿನೆಟ್ ಮಾಡಿಟ್ಟುಕೊಂಡ ತರಕಾರಿಯನ್ನು ಕುಕ್ಕರ್ ಗೆ ಸೇರಿಸಿ 5 ನಿಮಿಷಗಳ ಕಾಲ ಫ್ರೈ ಮಾಡಿ. ನಂತರ ಉಳಿದ ½ ಕಪ್ ಮೊಸರು ಸೇರಿಸಿ ಮಿಕ್ಸ್ ಮಾಡಿ. 4 ಲೋಟ ನೀರು ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿಸಿ. ಅಕ್ಕಿಯನ್ನು ಸೇರಿಸಿ 2 ವಿಷಲ್ ಕೂಗಿಸಿಕೊಂಡು ಗ್ಯಾಸ್ ಆಫ್ ಮಾಡಿದರೆ ರುಚಿಕರವಾದ ವೆಜ್ ಬಿರಿಯಾನಿ ಸವಿಯಲು ಸಿದ್ಧ.

For Latest News Updates, Join Our Whatsapp Community🚩
RELATED ARTICLES

Most Popular