ಹಿಂದಿನ ಕಾಲದಲ್ಲಿ ಶೀತ, ಕೆಮ್ಮಿಗೆ ಔಷಧವಾಗಿ ಬೆಳ್ಳುಳ್ಳಿಯನ್ನು ಬಳಸುತ್ತಿದ್ದರು. ತ್ವಚೆಯಲ್ಲಿ ಹುಳುಕಡ್ಡಿಯಾದರೆ ಬೆಳ್ಳುಳ್ಳಿ ರಸ ಹಚ್ಚಿ ಹೋಗಲಾಡಿಸುತ್ತಿದ್ದರು.
ಬೆಳಿಗ್ಗೆ ಎದ್ದಾಕ್ಷಣ ಬೆಳ್ಳುಳ್ಳಿಯನ್ನು ಸೇವಿಸಿದರೆ ಬೊಜ್ಜು ಕರಗುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಪಚನಕ್ರಿಯೆ ಸರಾಗವಾಗಿ ಆಗುತ್ತದೆ. ಹಸಿವು ಕಡಿಮೆ ಆಗುತ್ತದೆ. ಅಜೀರ್ಣದ ಸಮಸ್ಯೆ ಇರುವವರು ಬೆಳ್ಳುಳ್ಳಿ ತಿಂದರೆ ಸಮಸ್ಯೆ ಪರಿಹಾರವಾಗುತ್ತದೆ.
ಬೆಳ್ಳುಳ್ಳಿ ಎಸಳನ್ನು ಬಾಯಲ್ಲಿ ಇಟ್ಟುಕೊಳ್ಳುವುದರಿಂದ ಜ್ವರ, ಉಸಿರಾಟದ ತೊಂದರೆ ದೂರವಾಗುತ್ತದೆ. ರಕ್ತ ಸಂಚಾರ ಸರಾಗವಾಗಿ ನಡೆದು ಹೃದಯ ಬಲಶಾಲಿಯಾಗುತ್ತದೆ. ಕಬ್ಬಿಣಾಂಶದ ಕೊರತೆಯಿಂದ ರಕ್ತಹೀನತೆ ಉಂಟಾದಾಗ ನಿಶ್ಯಕ್ತಿ ಆಗುತ್ತದೆ. ಆಗ ಬೆಳ್ಳುಳ್ಳಿಯನ್ನು ಬಳಸುವುದು ಅತ್ಯುತ್ತಮ. ಬೆಳ್ಳುಳ್ಳಿಯನ್ನು ಬೇಯಿಸಿ ತಿನ್ನುವುದಕ್ಕಿಂತ ಹಸಿಯಾಗಿ ತಿನ್ನುವುದೇ ಆರೋಗ್ಯಕರ.