HomeHealthದೇಹದಲ್ಲಿ ʼಮೆಗ್ನೀಷಿಯಂʼ ಕೊರತೆಯಿಂದ ಕಾಡುತ್ತೆ ಈ ಸಮಸ್ಯೆ

ದೇಹದಲ್ಲಿ ʼಮೆಗ್ನೀಷಿಯಂʼ ಕೊರತೆಯಿಂದ ಕಾಡುತ್ತೆ ಈ ಸಮಸ್ಯೆ

ಮೆಗ್ನೀಷಿಯಂ ನಮ್ಮ ಎಲುಬು ಮತ್ತು ಹಲ್ಲುಗಳು ಗಟ್ಟಿಯಾಗಿರಲು ಸಹಾಯ ಮಾಡುತ್ತದೆ. ದೇಹದಲ್ಲಿ ಪ್ರೊಟೀನ್ ಅಂಶ ಚೆನ್ನಾಗಿ ಇರಬೇಕು ಎಂದರೆ ಮೆಗ್ನೀಷಿಯಂ ತುಂಬಾ ಅಗತ್ಯ.

ಪ್ರತಿದಿನ ನಮಗೆ 350 ಎಮ್.ಜಿ.ಯಿಂದ 450 ಎಮ್.ಜಿ.ಯಷ್ಟು ಮೆಗ್ನೀಷಿಯಂ ನಮ್ಮ ದೇಹಕ್ಕೆ ಬೇಕು. ಇದು ಕಡಿಮೆಯಾದರೆ ಹಲ್ಲು ಹಾಳಾಗುತ್ತದೆ, ಮೂಳೆಗಳು ಬಲಹೀನವಾಗುತ್ತದೆ. ನರಗಳು ಬಲಹೀನವಾಗುವುದು, ಹೃದಯದ ಬಡಿತ ಹೆಚ್ಚಾಗುವುದು ಮೊದಲಾದ ಸಮಸ್ಯೆಗಳು ಎದುರಾಗುತ್ತವೆ.

ಹೀಗಾಗಿ ನಿದ್ರಾಹೀನತೆ, ಮೂತ್ರಕ್ಕೆ ಸಂಬಂಧಿಸಿದ ಸಮಸ್ಯೆ, ಮಲಬದ್ಧತೆ ಕಾಡುತ್ತದೆ. ಮೆಗ್ನೀಷಿಯಂ ನಮ್ಮ ದೇಹದಲ್ಲಿ ಸರಿಯಾದ ಪ್ರಮಾಣದಲ್ಲಿದ್ದರೆ ಅದು ಮೂತ್ರಪಿಂಡದಲ್ಲಿ ಕಲ್ಲುಗಳು ಸಂಗ್ರಹವಾಗದಂತೆ ಕಾಪಾಡುತ್ತದೆ, ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ರಕ್ತದಲ್ಲಿರುವ ಸಕ್ಕರೆಯನ್ನು ಶಕ್ತಿಯಾಗಿ ಬದಲಾಯಿಸುತ್ತದೆ. ಮೆದುಳನ್ನು ಚುರುಕಾಗಿರುವಂತೆ ಮಾಡುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸೊಪ್ಪು, ತರಕಾರಿಗಳು, ಪಾಲಾಕ್ ಸೊಪ್ಪು, ದ್ವಿದಳ ಧಾನ್ಯಗಳು, ಮೊಸರು, ನಟ್ಸ್, ಬಾಳೆಹಣ್ಣು, ಕುಂಬಳಕಾಯಿ ಬೀಜ, ಸೋಯಾ ಬೀನ್ಸ್ ನ್ನು ಇದಕ್ಕಾಗಿ ಸೇವಿಸಬೇಕು.

For Latest News Updates, Join Our Whatsapp Community🚩
RELATED ARTICLES

Most Popular