HomeBeauty15 ದಿನದಲ್ಲಿ ತೂಕ ಇಳಿಸಬೇಕಾ...? ಫಾಲೋ ಮಾಡಿ ಈ ʼಸಿಂಪಲ್ ಟಿಪ್ಸ್ʼ

15 ದಿನದಲ್ಲಿ ತೂಕ ಇಳಿಸಬೇಕಾ…? ಫಾಲೋ ಮಾಡಿ ಈ ʼಸಿಂಪಲ್ ಟಿಪ್ಸ್ʼ

ವ್ಯಾಯಾಮ ಮಾಡುವುದೆಂದರೆ ಎಲ್ಲರಿಗೂ ಇಷ್ಟ. ಆದರೆ ಅಷ್ಟೊಂದು ಸಮಯವನ್ನು ಅದಕ್ಕಾಗಿ ಮೀಸಲಿಡಲು ಮಾತ್ರ ಹಿಂದೆ ಮುಂದೆ ನೋಡುತ್ತೇವೆ. ಈ ಪಾನೀಯವನ್ನು ಸೇವಿಸಿ ಕಾಲು ಗಂಟೆ ಹೊತ್ತು ವ್ಯಾಯಾಮ ಮಾಡಿದರೆ ಸಾಕು. ಬೊಜ್ಜು ಕರಗುವುದು ಖಚಿತ.

ಒಂದು ಲೋಟ ಬಿಸಿ ನೀರಿಗೆ ಮಸಾಲೆಗೆ ಬಳಸುವ ಚಕ್ಕೆಯನ್ನು ಸಣ್ಣಗೆ ಪುಡಿ ಮಾಡಿ ಹಾಕಬೇಕು. ಜೊತೆಗೆ ಒಂದು ಚಮಚ ಜೇನುತುಪ್ಪವನ್ನು ಹಾಕಿ. ಬೆಳಿಗ್ಗೆ ಎದ್ದಾಕ್ಷಣ ಅಂದರೆ ವ್ಯಾಯಾಮ ಮಾಡುವ ಮೊದಲು ಇದನ್ನು ಕುಡಿಯುವುದರಿಂದ ದೇಹದ ತೂಕ ಇಳಿಯುತ್ತದೆ.

ರಾತ್ರಿ ಊಟ ಮಾಡಿದ ನಂತರ ಮಲಗುವಾಗ ಇದನ್ನು ಕುಡಿಯುವುದು ಕೂಡಾ ಒಳ್ಳೆಯದೇ. ಇದಕ್ಕೆ ಎರಡು ಹನಿ ನಿಂಬೆರಸ ಸೇರಿಸಿ ಸೇವಿಸುವುದು ಉಪಯುಕ್ತ. ಆದರೆ ಅಸಿಡಿಟಿ ಸಮಸ್ಯೆ ಇರುವವರು ಇದರಿಂದ ದೂರ ಇರುವುದು ಒಳಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವ್ಯಾಯಾಮದಲ್ಲೂ ಸರಳ ಸುಲಭ ವಿಧಾನಗಳಿವೆ. ಅಡುಗೆ ಮನೆಯಲ್ಲಿ ಇರುವಾಗ, ಕಚೇರಿಯಲ್ಲಿ ಕುಳಿತಿರುವಾಗ ಮಾಡಬಹುದಾದ ವ್ಯಾಯಾಮಗಳ ಬಗ್ಗೆ ತಿಳಿಯಿರಿ. ಕಟ್ಟುನಿಟ್ಟಾಗಿ ಅದನ್ನು ಪಾಲಿಸಿ. 15 ದಿನದೊಳಗೆ ನಿಮ್ಮ ದೇಹ ತೂಕ ಇಳಿಯುವುದು ನಿಶ್ಚಿತ.

For Latest News Updates, Join Our Whatsapp Community🚩
RELATED ARTICLES

Most Popular