HomeHealthಮನೆಯಲ್ಲೇ ಇದೆ ಕೆಮ್ಮಿನ ಸಮಸ್ಯೆಗೆ ಪರಿಹಾರ

ಮನೆಯಲ್ಲೇ ಇದೆ ಕೆಮ್ಮಿನ ಸಮಸ್ಯೆಗೆ ಪರಿಹಾರ

ಹೆಚ್ಚು ತಣ್ಣಗಿನ ಆಹಾರ ಸೇವಿಸಿದಾಗ, ದೇಹ ತಂಪಾದಾಗ, ಹವಾಮಾನದಲ್ಲಿ ಬದಲಾವಣೆಯಾದಾಗ ಶೀತ ಸೇರಿದಂತೆ, ಕೆಮ್ಮಿನ ಸಮಸ್ಯೆಗಳು ಬಹುವಾಗಿ ಕಾಡುತ್ತವೆ. ಇದರಿಂದ ಕಿರಿಕಿರಿಯಾಗುವುದು ಸಾಮಾನ್ಯ.

ಶುಂಠಿ ತುಂಡನ್ನು ಜಜ್ಜಿ ಚಿಟಿಕೆ ಉಪ್ಪು ಬೆರೆಸಿ ಅದನ್ನು ಬಾಯಿಯಲ್ಲೇ ಇರಿಸಿಕೊಳ್ಳುವುದರಿಂದ ಕೆಮ್ಮನ್ನು ದೂರ ಮಾಡಬಹುದು. ಇದರ ರಸ ಗಂಟಲಿಗೆ ಇಳಿಯುತ್ತಿದ್ದರೆ ಗಂಟಲು ನೋವು ಹಾಗೂ ಕೆಮ್ಮು ದೂರವಾಗುತ್ತದೆ. ಮೂರು ದಿನ ಬಿಡದೆ ಹೀಗೆ ಮಾಡಿದರೆ ಕೆಮ್ಮಿನಿಂದ ಪರಿಹಾರ ದೊರೆಯುತ್ತದೆ.

ವೀಳ್ಯದೆಲೆಗೆ ಶುಂಠಿ ರಸ ಬೆರೆಸಿಡಿ. ಇದಕ್ಕೆ ಜೇನುತುಪ್ಪ ಅಥವಾ ಬೆಲ್ಲ ಸೇರಿಸಿ ಸವಿಯುವುದರಿಂದ ಕೆಮ್ಮಿನ ಸಮಸ್ಯೆಯನ್ನು ದೂರ ಮಾಡಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕುದಿಯುವ ನೀರಿಗೆ ಜೇನುತುಪ್ಪ ಸೇರಿಸಿ ಕುಡಿಯಿರಿ. ದಿನಕ್ಕೆ ಮೂರು ಬಾರಿ ಬಿಸಿಯಾದ ಈ ನೀರನ್ನು ಸೇವಿಸುವುದರಿಂದ ಕೆಮ್ಮು ದೂರವಾಗುತ್ತದೆ.

ತುಳಸಿ ಎಲೆಯ ನೀರಿಗೆ ಕರಿಮೆಣಸು, ಶುಂಠಿ, ಜೇನುತುಪ್ಪ ಬೆರೆಸಿ ಕುಡಿದರೂ ಕೆಮ್ಮು ದೂರವಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular