ಇಂದಿನ ಕಾಲದಲ್ಲಿ ಲೈಂಗಿಕ ಸಂಬಂಧದ ಬಗ್ಗೆ ಎಲ್ಲರೂ ತಿಳಿಯಲು ಇಷ್ಟಪಡ್ತಾರೆ. ವಯಸ್ಕರೆಲ್ಲರಿಗೂ ಇದ್ರ ಬಗ್ಗೆ ಅಲ್ಪಸ್ವಲ್ಪವಾದ್ರೂ ಜ್ಞಾನವಿರುತ್ತದೆ. ಕೆಲ ಮಹಿಳೆಯರು ತಾವು ಲೈಂಗಿಕ ಜೀವನದಲ್ಲಿ ಮಾಸ್ಟರ್ ಎಂದು ನಂಬುತ್ತಾರೆ. ತಮಗೆ ಯಾವುದೇ ಮಾರ್ಗದರ್ಶನ ಮತ್ತು ಸಲಹೆಗಳು ಅಗತ್ಯವಿಲ್ಲ ಎಂದುಕೊಳ್ತಾರೆ. ಆದರೆ ಸಂಭೋಗದ ಬಗ್ಗೆ ಅವ್ರಿಗೆ ಅನೇಕ ವಿಷ್ಯಗಳು ತಿಳಿದಿರುವುದಿಲ್ಲ.
ಪ್ರತಿಯೊಬ್ಬ ಮಹಿಳೆಯೂ ಸೆಕ್ಸ್ ನ ಒಂದು ಭಂಗಿಯನ್ನು ತುಂಬ ಇಷ್ಟಪಡ್ತಾಳೆ. ಅದ್ರಲ್ಲಿ ಹೆಚ್ಚು ಸುಖ ಕಾಣ್ತಾಳೆ. ಆದ್ರೆ ಕೆಲ ಮಹಿಳೆಯರಿಗೆ ಹೆಚ್ಚು ಸಂತೋಷ, ಸಂತೃಪ್ತಿ ಸಿಗುವ ಭಂಗಿ ಯಾವುದು ಎಂಬುದು ಗೊತ್ತಿರುವುದಿಲ್ಲ.
ಇನ್ನು ಕೆಲ ಮಹಿಳೆಯರಿಗೆ ಅವ್ರ ದೇಹದ ಬಗ್ಗೆ ಅಪನಂಬಿಕೆಯಿರುತ್ತದೆ. ನಗ್ನ ಸ್ಥಿತಿಯಲ್ಲಿ ತನ್ನ ದೇಹವನ್ನು ಪತಿ ಒಪ್ಪದೆ ಹೋದಲ್ಲಿ ಎಂಬ ಭಯವಿರುತ್ತದೆ. ಆದ್ರೆ ಇದು ಅನಗತ್ಯ. ಪತಿ-ಪತ್ನಿ ಮಧ್ಯೆ ಪ್ರೀತಿಯಿದ್ರೆ ಸಂಭೋಗದ ವೇಳೆ ಇಂಥ ವಿಷ್ಯಗಳು ಮಹತ್ವ ಪಡೆಯುವುದಿಲ್ಲ.
ಲೈಂಗಿಕತೆ ಬಗ್ಗೆ ಎಷ್ಟೇ ತಿಳಿದಿದ್ದರೂ ಅದು ಬೋರ್ ಆಗುವ ಸಾಧ್ಯತೆಯಿರುತ್ತದೆ. ಹಾಗಾಗಿ ಅದ್ರಲ್ಲಿ ಹೊಸ ಪ್ರಯೋಗಗಳನ್ನು ಮಾಡಬೇಕು. ಹೊಸ ಭಂಗಿ, ವಿಧಾನಗಳನ್ನು ಅನುಸರಿಸಿ ಸಂಗಾತಿಗೆ ಸುಖ ನೀಡಬೇಕೆಂಬುದನ್ನು ಮಹಿಳೆ ತಿಳಿದಿರಬೇಕು. ಸೆಕ್ಸ್ ಆಟಿಕೆ ಸೇರಿದಂತೆ ಸಂಭೋಗದಲ್ಲಿ ಮಸಾಲೆ ಬೆರೆಸುವುದನ್ನು ಕಲಿಯಿರಿ.