ಬಹುಪಯೋಗಿ ʼಬದನೆʼ ಸೇವನೆಯಿಂದ ಸಿಗುತ್ತೆ ಈ ಲಾಭ……!

ಬದನೆಕಾಯಿಯಿಂದ ಬೋಂಡಾ, ಪಲ್ಯ, ಸಾಂಬಾರ್, ಬಜ್ಜಿ, ರೊಟ್ಟಿ ತಯಾರಿಸಬಹುದು ಎಂಬುದು ಎಲ್ಲರಿಗೂ ತಿಳಿದ ಸಂಗತಿ. ನಂಜು ಎಂಬ ಕಾರಣಕ್ಕೆ ಹಲವರು ಈ ತರಕಾರಿಯಿಂದ ದೂರವೇ ಉಳಿಯುತ್ತಾರೆ. ಆದರೆ ಇದನ್ನು ನಿಯಮಿತವಾಗಿ ಸೇವಿಸಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಬದನೆಕಾಯಿಯಲ್ಲಿ ಆರೋಗ್ಯಕ್ಕೆ ಸಹಕಾರಿಯಾಗುವ ಪೌಷ್ಟಿಕಾಂಶಗಳು ಇವೆ. ನಾರಿನ ಅಂಶ ಸಾಕಷ್ಟಿದ್ದು ಕಡಿಮೆ ಕ್ಯಾಲೊರಿ ಇದೆ. ಮನುಷ್ಯನಿಗೆ ಅಗತ್ಯವಾದ ಆಂಟಿ ಆಕ್ಸಿಡೆಂಟ್ ಗಳು ಹೇರಳವಾಗಿವೆ. ದೇಹದಲ್ಲಿರುವ ವಿಷಕಾರಿ ಅಂಶಗಳಾದ ಫ್ರೀ ರಾಡಿಕಲ್ಸ್ ಗಳ ವಿರುದ್ಧ ಹೋರಾಡುತ್ತದೆ. ಈ ಮೂಲಕ ಮನುಷ್ಯನ ದೇಹಕ್ಕೆ ರಕ್ಷಣೆ ಒದಗಿಸುತ್ತದೆ.

ಇತ್ತೀಚಿಗೆ ಮೊಲಗಳ ದೇಹದ ಮೇಲೆ ಪ್ರಯೋಗ ನಡೆಸಿ ಬದನೆಯಿಂದ ಹೃದಯ ಸಂಬಂಧಿ ಕಾಯಿಲೆಗಳು ಕಡಿಮೆಯಾಗುತ್ತವೆ ಎಂಬುದನ್ನು ವಿಜ್ಞಾನಿಗಳು ಆವಿಷ್ಕರಿಸಿದ್ದಾರೆ. ಹಾಗಾಗಿ ಕೊಲೆಸ್ಟ್ರಾಲ್ ಸಮಸ್ಯೆಗೂ ಇದು ಮುಕ್ತಿ ಒದಗಿಸುತ್ತದೆ ಎಂಬುದು ರುಜುವಾತಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read