HomeBeautyನೇರ ನೀಳ ಕೂದಲಿಗಾಗಿ ಇಲ್ಲಿದೆ ಸುಲಭ ʼಟಿಪ್ಸ್ʼ

ನೇರ ನೀಳ ಕೂದಲಿಗಾಗಿ ಇಲ್ಲಿದೆ ಸುಲಭ ʼಟಿಪ್ಸ್ʼ

ನಯವಾದ ಉದ್ದನೆಯ ಕೂದಲು ನಿಮ್ಮದಾಗಬೇಕೆಂಬ ಬಯಕೆಯೇ…? ಅದಕ್ಕಾಗಿ ಬ್ಯೂಟಿ ಪಾರ್ಲರ್ ಬಾಗಿಲು ತಟ್ಟದೆ, ಮನೆಯಲ್ಲಿಯೇ ಕೂದಲ ಸ್ಟೈಟನಿಂಗ್ ಮಾಡಿಕೊಳ್ಳಬಹುದು. ಹೇಗೆಂದಿರಾ…?

ನಾಲ್ಕು ಚಮಚ ಅಕ್ಕಿಗೆ ಎರಡು ಕಪ್ ನೀರು ಹಾಕಿ ಬೇಯಿಸಿ, ತಣಿಸಿ. ಮಿಕ್ಸಿಗೆ ಒಂದು ಚಮಚ ತುಪ್ಪ, ಒಂದು ಚಮಚ ತೆಂಗಿನ ತುರಿ ಸೇರಿಸಿ ಅನ್ನದೊಂದಿಗೆ ರುಬ್ಬಿ. ಅದನ್ನು ತಲೆಕೂದಲ ಬುಡದಿಂದ ಕೆಳಗಿನವರೆಗೆ ಹಚ್ಚಿ. ಇದರಿಂದ ಕೂದಲು ಉದ್ದವಾಗಿ, ಬಲಿಷ್ಠವಾಗಿ ಬೆಳೆಯುವುದು ಮಾತ್ರವಲ್ಲ, ಸ್ಟ್ರೈಟನಿಂಗ್ ಮಾಡಿದ ಪರಿಣಾಮವನ್ನು ನೀಡುತ್ತದೆ.

ತಲೆ ಕೂದಲು ಬಲಿಷ್ಠವಾಗಿಸಲು ಮತ್ತು ನಯವಾಗಿಸಲು ಅಕ್ಕಿಯಷ್ಟು ಉತ್ತಮ ಸಾಮಗ್ರಿ ಇನ್ನೊಂದಿಲ್ಲ. ಹಾಗಾಗಿ ಯಾವುದೇ ಅಡ್ಡ ಪರಿಣಾಮದ ಭಯವಿಲ್ಲದೆ ಇದನ್ನು ಬಳಸಿ ಹಾಗೂ ನೇರ ನೀಳ ಕೂದಲನ್ನು ನಿಮ್ಮದಾಗಿಸಿಕೊಳ್ಳಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular