ವಿವಿಧ ಬಗೆಯ ಫೇಸ್ ಪ್ಯಾಕ್ ಗಳನ್ನು ಮಾಡಿಕೊಳ್ಳುವಾಗ ರೋಸ್ ವಾಟರ್ ಅನ್ನು ಬಳಸುತ್ತೇವೆ.
ಆದರೆ ನಮ್ಮ ಮನೆಯಲ್ಲೇ ಬೆಳೆದ ಗುಲಾಬಿ ಹೂವಿನ ಎಸಳುಗಳು ಮುಖಕ್ಕೆ ಕಾಂತಿ ಹಾಗೂ ಹೊಳಪನ್ನು ತಂದುಕೊಡಬಲ್ಲವು ಎಂಬುದು ನಿಮಗೆ ಗೊತ್ತೇ?
ನಿಸ್ತೇಜ ಮುಖಕ್ಕೆ ಕಳೆ ಕಟ್ಟುವ ಗುಲಾಬಿ ಹೂವಿನ ಎಸಳುಗಳು ಮುಖದ ಮೊಡವೆಗಳನ್ನೂ ನಿವಾರಿಸುತ್ತವೆ. ಗುಲಾಬಿಯ ಹತ್ತು ಎಸಳಿಗೆ ಹಸಿ ಹಾಲು ಹಾಗೂ ಜೇನು ಸೇರಿಸಿ ರುಬ್ಬಿ. ದಪ್ಪನೆಯ ಪೇಸ್ಟ್ ಅನ್ನು ಕುತ್ತಿಗೆ, ಮುಖಕ್ಕೆ ಲೇಪಿಸಿ. ಮೂವತ್ತು ನಿಮಿಷಗಳ ನಂತರ ಸ್ವಚ್ಛವಾದ ನೀರಿನಲ್ಲಿ ತೊಳೆಯಿರಿ.
ಇದು ಮುಖಕ್ಕೆ ನೈಸರ್ಗಿಕ ಕಾಂತಿ ಕೊಟ್ಟು ತ್ವಚೆಯನ್ನು ಮೃದುವಾಗಿಸುತ್ತದೆ. ಸನ್ ಸ್ಕ್ರೀನ್ ನಂತೆಯೂ ಕಾರ್ಯ ನಿರ್ವಹಿಸುವ ಇದು ಮುಖ ಹಾಗೂ ಕುತ್ತಿಗೆಯ ಮೇಲಿನ ಸನ್ ಬರ್ನ್ ಸೇರಿದಂತೆ ಎಲ್ಲಾ ಕಲೆಗಳನ್ನು ತೆಗೆದು ಹಾಕುತ್ತದೆ.
ಗುಲಾಬಿ ಎಸಳನ್ನು ಸ್ನಾನದ ವೇಳೆ ನೀರಿಗೆ ಹಾಕುವುದರಿಂದ ಇಡೀ ದಿನ ನೀವು ತಾಜಾತನದಿಂದಿರುವಿರಿ, ರಾತ್ರಿ ವೇಳೆ ಸ್ನಾನ ಮಾಡಿದರೆ ಉತ್ತಮ ನಿದ್ದೆ ಪಡೆಯಬಹುದು.