ಈಗ ವಯಸ್ಸಿಗೂ ಮೊದಲೇ ಬಿಳಿ ಕೂದಲು ಕಾಣಿಸಿಕೊಳ್ಳಲು ಶುರುವಾಗುತ್ತದೆ. ಇದಕ್ಕೆ ನಾವು ತಿನ್ನುವ ಆಹಾರ, ಬೆಳೆಸಿಕೊಂಡ ಜೀವನ ಪದ್ಧತಿ, ಉಪಯೋಗಿಸುವ ಕೆಮಿಕಲ್ ಯುಕ್ತ ಶಾಂಪೂವಿನಿಂದ ಬಿಳಿಕೂದಲು ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದನ್ನು ಪ್ರಾರಂಭದಲ್ಲಿಯೇ ಸರಿಯಾಗಿ ಕಾಳಜಿ ತಗೆದುಕೊಂಡರೆ ಬಿಳಿ ಕೂದಲಿನ ಸಮಸ್ಯೆಯಿಂದ ಪಾರಾಗಬಹುದು.
ಕರಿಬೇವಿನೆಲೆ, ವೀಳ್ಯದೆಲೆ, ಮೆಂತೆಸೊಪ್ಪು, ಬೆಟ್ಟದ ನೆಲ್ಲಿಕಾಯಿ (ಬೀಜ ತೆಗೆದು ಒಣಗಿಸಿದ್ದು)
ಒಂದು ಬಾಣಲೆಯಲ್ಲಿ ½ ಲೀಟರ್ ತೆಂಗಿನೆಣ್ಣೆ ಹಾಕಿ ಅದು ಬಿಸಿಯಾಗುತ್ತಲೆ ಮೇಲೆ ತಿಳಿಸಿದ ವಸ್ತುಗಳನ್ನು ಸಮ ಪ್ರಮಾಣದಲ್ಲಿ ಹಾಕಿ. ಮಂದ ಉರಿಯಲ್ಲಿ 10 ನಿಮಿಷ ಚೆನ್ನಾಗಿ ಕುದಿಸಿಕೊಳ್ಳಿ. ಇದು ತಣ್ಣಗಾದ ಮೇಲೆ ಗಾಜಿನ ಡಬ್ಬಿಯಲ್ಲಿ ತುಂಬಿಸಿಡಿ. ವಾರಕ್ಕೆ ಎರಡು ಬಾರಿ ಇದರಿಂದ ಮಸಾಜ್ ಮಾಡಿಕೊಂಡು ಒಂದು ಗಂಟೆ ಹಾಗೇ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ತಲೆ ಸ್ನಾನ ಮಾಡಿ.
ಇನ್ನು 1 ಗ್ಲಾಸ್ ನೀರಿಗೆ ಒಂದು ಚಮಚ ಬ್ಲಾಕ್ ಟೀ ಪೌಡರ್ ಹಾಕಿ ಕುದಿಸಿಕೊಂಡು ಇದರ ಡಿಕಾಕ್ಷನ್ ತೆಗೆದಿಟ್ಟುಕೊಳ್ಳಿ. 2 ಚಮಚ ದಷ್ಟು ಮದರಂಗಿ ಪುಡಿ, ಬೆಟ್ಟದನೆಲ್ಲಿಕಾಯಿ ಪುಡಿಯನ್ನು ಸೇರಿಸಿಕೊಂಡು. 6 ಗಂಟೆಗಳ ಕಾಲ ಹಾಗೆಯೇ ಬಿಡಿ. ನಂತರ ಇದನ್ನು ತಲೆಗೆ ಚೆನ್ನಾಗಿ ಹಚ್ಚಿ. ಒಂದು ಗಂಟೆ ನಂತರ ಈ ಪ್ಯಾಕ್ ಅನ್ನು ಹಾಗೇಯೇ ಬಿಡಿ. ಇದರಿಂದ ಕೂದಲು ಬೆಳ್ಳಗಾಗುವುದು ತಪ್ಪುತ್ತದೆ.