HomeBeautyಕಣ್ಣಿನ ಮೇಕಪ್ ತೆಗೆಯಲು ಈ ಟಿಪ್ಸ್ ಬಳಸಿ

ಕಣ್ಣಿನ ಮೇಕಪ್ ತೆಗೆಯಲು ಈ ಟಿಪ್ಸ್ ಬಳಸಿ

ಸಂಜೆ ಪಾರ್ಟಿಗೆ, ಅಥವಾ ಮದುವೆ ಹೀಗೆ ಯಾವುದೆ ಫಂಕ್ಷನ್ ಗೆ ಹೋಗುವಾಗ ಕಣ್ಣಿನ ಮೇಕಪ್ ಮಾಡಿಕೊಂಡಿರುತ್ತೇವೆ. ಆದರೆ ಮನೆಗೆ ಬಂದಾಗ ಇದನ್ನು ತೆಗೆಯದೇ ಹಾಗೇ ಬಿಟ್ಟರೆ ಕಣ್ಣಿಗೆ ಹಾನಿಯಾಗುವ ಸಾಧ್ಯತೆ ಇದೆ. ಈ ಐ ಮೇಕಪ್ ಅನ್ನು ತೆಗೆಯುವುದೇ ದೊಡ್ಡ ಕೆಲಸವಾಗಿರುತ್ತದೆ. ಸುಲಭವಾಗಿ ಈ ಐ ಮೇಕಪ್ ಅನ್ನು ತೆಗೆಯುವ ವಿಧಾನ ಇಲ್ಲಿದೆ ನೋಡಿ.

ಕಣ್ಣಿಗೆ ಹಚ್ಚಿಕೊಂಡ ಮೇಕಪ್ ತೆಗೆಯುವಾಗ ಯಾವುದೇ ಕಾರಣಕ್ಕೂ ಜೋರಾಗಿ ಉಜ್ಜಬೇಡಿ. ಇದರಿಂದ ಕಣ್ಣಿಗೆ ತೊಂದರೆಯಾಗುತ್ತದೆ. ಒಂದು ಹತ್ತಿಯ ಉಂಡೆ ತೆಗೆದುಕೊಂಡು ಅದನ್ನು ಶುದ್ಧವಾದ ನೀರು ಅಥವಾ ಬೇಬಿ ಆಯಿಲ್ ನಲ್ಲಿ ಅದ್ದಿ ನಿಧಾನಕ್ಕೆ ಮೇಕಪ್ ತೆಗೆಯಿರಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ಕೆಲವರು ಯಾವುದ್ಯಾವುದೋ ಕೆಮಿಕಲ್ ಗಳನ್ನು ಬಳಸಿ ಐ ಮೇಕಪ್ ತೆಗೆಯುತ್ತಾರೆ. ಈ ಭಾಗ ಸೂಕ್ಷ್ಮವಾಗಿರುವುದರಿಂದ ಆದಷ್ಟು ಎಚ್ಚರಿಕೆಯಿಂದ ಮೇಕಪ್ ತೆಗೆಯಿರಿ.

ಬಾದಾಮಿ ಎಣ್ಣೆ ಕೂಡ ಮೇಕಪ್ ತೆಗೆಯಲು ಹೆಚ್ಚು ಸಹಾಯಕಾರಿಯಾಗಿದೆ. ಇನ್ನು ಟಿಯರ್ ಫ್ರೀ ಬೇಬಿ ಶ್ಯಾಂಪೂ ಬಳಸಿ ಕೂಡ ಕಣ್ಣಿಗೆ ಹಚ್ಚಿದ ಮಸ್ಕರಾ, ಐ ಲೈನರ್ ಅನ್ನು ತೆಗೆಯಿರಿ.

ಶ್ಯಾಂಪೂ ಬಳಸಲು ಆಗದಿದ್ದರೆ ಬೇಬಿ ವೈಪ್ಸ್ ಕೂಡ ಬಳಸಿ ನಿಧಾನಕ್ಕೆ ಕಣ್ಣಿನ ಮೇಕಪ್ ತೆಗೆಯಿರಿ. ಮೇಕಪ್ ಎಲ್ಲಾ ತೆಗೆದ ಮೇಲೆ ಶುದ್ಧವಾದ ನೀರಿನಿಂದ ಮುಖ ತೊಳೆದು ಒರೆಸಿಕೊಂಡು ಬಾದಾಮಿ ಎಣ್ಣೆ ಅಥವಾ ಆಲೀವ್ ಆಯಿಲ್ ನಿಂದ ನಿಧಾನಕ್ಕೆ ಕಣ್ಣಿನ ಸುತ್ತ ಮಸಾಜ್ ಮಾಡಿಕೊಳ್ಳಿ.

For Latest News Updates, Join Our Whatsapp Community🚩
RELATED ARTICLES

Most Popular