ಅಪ್ಪರ್ ಲಿಪ್ಸ್ ಕೂದಲು ತೆಗೆಯಲು ಇಲ್ಲಿದೆ ʼಮನೆ ಮದ್ದುʼ

ಸೌಂದರ್ಯಕ್ಕೆ ಇನ್ನೊಂದು ಹೆಸರು ಹುಡುಗಿಯರು. ಮುಖ, ಕೈ, ಕಾಲು, ಕೂದಲು ಹೀಗೆ ದೇಹದ ಪ್ರತಿಯೊಂದು ಭಾಗದ ಸೌಂದರ್ಯಕ್ಕೂ ಹುಡುಗಿಯರು ಮಹತ್ವ ನೀಡುತ್ತಾರೆ. ತುಟಿ ಮೇಲ್ಭಾಗದಲ್ಲಿ ಬೆಳೆಯುವ ಕೂದಲನ್ನು ಅನೇಕರು ತೆಗೆಯುತ್ತಾರೆ.

ಅಪ್ಪರ್ ಲಿಪ್ಸ್ ಮಾಡಿಸುವುದು ಸುಲಭವಲ್ಲ. ಬ್ಯೂಟಿಪಾರ್ಲರ್ ನಲ್ಲಿ ಅಪ್ಪರ್ ಲಿಪ್ ಮಾಡಿಸಿಕೊಳ್ಳುವ ಹುಡುಗಿಯರು ನೋವು ತಿನ್ನುತ್ತಾರೆ. ಮನೆಯಲ್ಲೇ ಇದಕ್ಕೆ ಸುಲಭ ಮದ್ದಿದೆ.

ನಿಂಬೆ ಮತ್ತು ಸಕ್ಕರೆಯ ಪೇಸ್ಟ್ ಬಳಸಿ ಮನೆಯಲ್ಲಿ ಸುಲಭವಾಗಿ ಅಪ್ಪರ್ ಲಿಪ್ಸ್ ಕೂದಲನ್ನು ತೆಗೆಯಬಹುದು. ನಿಂಬೆ ಹಣ್ಣು  ಬ್ಲೀಚಿಂಗ್ ಗುಣಗಳನ್ನು ಹೊಂದಿರುತ್ತವೆ. ಈ ಪೇಸ್ಟ್ ಹಚ್ಚಿದ್ರೆ ಕೂದಲು ನೋವಿಲ್ಲದೆ ಚರ್ಮದಿಂದ ಹೊರ ಬರುತ್ತದೆ. ಫೇಸ್ಟ್ ತೆಗೆಯುವಾಗ ಜಾಗೃತೆ ವಹಿಸಬೇಕು.

ಬೇಕಾಗುವ ಸಾಮಗ್ರಿ, 1 ನಿಂಬೆ ರಸ, 1 ಟೀ ಸ್ಪೂನ್ ಸಕ್ಕರೆ.

ವಿಧಾನ: ಮೊದಲು ನಿಂಬೆ ರಸವನ್ನು ತೆಗೆದು ಇದನ್ನು ಸಕ್ಕರೆಯಲ್ಲಿ ಬೆರೆಸಿ ಪೇಸ್ಟ್ ತಯಾರಿಸಬೇಕು. ಈ ಪೇಸ್ಟ ನ್ನು ತುಟಿಗಳ ಮೇಲಿರುವ ಕೂದಲಿಗೆ ಹಚ್ಚಿ 15 ನಿಮಿಷಗಳ ಕಾಲ ಒಣಗಲು ಬಿಡಿ. ನಂತರ ನೀರು ಹಾಕಿ ಸ್ವಚ್ಛಗೊಳಿಸಿ.

ಇನ್ನು ಮೊಟ್ಟೆ ಬಿಳಿ ಭಾಗ ಕೂಡ ಕೂದಲು ತೆಗೆಯಲು ನೆರವಾಗುತ್ತದೆ. 1 ಮೊಟ್ಟೆಯ ಬಿಳಿ ಭಾಗ,1 ಟೀಸ್ಪೂನ್ ಕಾರ್ನ್ ಹಿಟ್ಟು. 1 ಟೀಸ್ಪೂನ್ ಸಕ್ಕರೆಯನ್ನು ಮಿಕ್ಸ್ ಮಾಡಿ ತುಟಿ ಮೇಲಿನ ಕೂದಲಿಗೆ ಹಚ್ಚಿ. 15 ನಿಮಿಷ ಬಿಟ್ಟು ಅದನ್ನು ತೊಳೆಯಿರಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read