ಹಿಂದೂ ಧರ್ಮದಲ್ಲಿ ಅಡಿಕೆಗೆ ಮಹತ್ವದ ಸ್ಥಾನವಿದೆ. ದೇವಾನುದೇವತೆಗಳ ಪೂಜೆ ವೇಳೆ ಅಡಿಕೆಯನ್ನು ಬಳಸಲಾಗುತ್ತದೆ. ಈ ಒಂದು ಅಡಿಕೆ ನಿಮ್ಮನ್ನು ರಾತ್ರೋರಾತ್ರಿ ಶ್ರೀಮಂತರನ್ನಾಗಿ ಮಾಡಬಲ್ಲದು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಅಡಿಕೆಯ ಉಪಾಯ ಮಾಡಿದ್ರೆ ಅರ್ಧಕ್ಕೆ ನಿಂತ ಕೆಲಸ ಪೂರ್ಣಗೊಳ್ಳಲಿದೆ.
ಒಂದು ಲವಂಗ ಹಾಗೂ ಒಂದು ಅಡಿಕೆ ಅರ್ಧಕ್ಕೆ ನಿಂತ ಕೆಲಸವನ್ನು ಪೂರ್ಣಗೊಳಿಸಬಲ್ಲದು. ಕೆಲಸಕ್ಕೆ ಹೋಗುವ ಮೊದಲು ಅಡಿಕೆಯನ್ನು ಜೇಬಿನಲ್ಲಿಡಿ. ಲವಂಗವನ್ನು ಬಾಯಿಗೆ ಹಾಕಿ ಅದ್ರ ರಸ ಹೀರುತ್ತ ಗಣೇಶನ ಮಂತ್ರ ಜಪಿಸಿ. ಕೆಲಸ ಮುಗಿಸಿ ವಾಪಸ್ ಬಂದ್ಮೇಲೆ ಅಡಿಕೆಯನ್ನು ಉನ್ನತ ಸ್ಥಳದಲ್ಲಿಡಿ.
ಮನೆಯ ಕಪಾಟಿನಲ್ಲಿ ಅಡಿಕೆಯನ್ನಿಟ್ಟರೆ ಮನೆಯಲ್ಲಿ ಲಕ್ಷ್ಮಿ ವಾಸ ಶುರು ಮಾಡ್ತಾಳೆ. ಅಡಿಕೆಗೆ ಅಕ್ಷತೆ ಹಾಗೂ ಅರಿಶಿನ ಕುಂಕುಮ ಹಾಕಿ ಪೂಜೆ ಮಾಡಬೇಕು. ಹೀಗೆ ಪೂಜೆ ಮಾಡಿ ಕಪಾಟಿನಲ್ಲಿಟ್ಟ ಅಡಿಕೆ ಲಾಭಕರವೆಂದು ಪರಿಗಣಿಸಲಾಗಿದೆ.
ಶನಿವಾರ ರಾತ್ರಿ ಅಶ್ವತ್ಥ ಮರದ ಪೂಜೆ ಮಾಡುವ ವೇಳೆ ಅಡಿಕೆ ಜೊತೆ ಒಂದು ರೂಪಾಯಿ ನಾಣ್ಯವನ್ನಿಡಬೇಕು. ಮರುದಿನ ಎಲೆ ತೆಗೆದುಕೊಂಡು ಬಂದು ಕಪಾಟಿನಲ್ಲಿಡಿ.