HomeLatest Newsಆರೋಗ್ಯ, ಸೌಂದರ್ಯದಲ್ಲಿ ಕಡಲೆ ಹಿಟ್ಟಿನ ಪಾತ್ರವೇನು ಗೊತ್ತಾ....?

ಆರೋಗ್ಯ, ಸೌಂದರ್ಯದಲ್ಲಿ ಕಡಲೆ ಹಿಟ್ಟಿನ ಪಾತ್ರವೇನು ಗೊತ್ತಾ….?

ಕಡಲೇ ಹಿಟ್ಟು ಎಲ್ಲರ ಮನೆಯಲ್ಲೂ ಇದ್ದೇ ಇರುತ್ತದೆ. ಅಡುಗೆಯಿಂದ ಹಿಡಿದು ಸೌಂದರ್ಯದವರೆಗೆ ಇದರ ಪ್ರಯೋಜನವಿದೆ. ಇದರಲ್ಲಿ ಸಾಕಷ್ಟು ಆರೋಗ್ಯಕರವಾದ ಅಂಶವಿದೆ.

ಹಿಂದಿನಿಂದಲೂ ಇದರ ಬಳಕೆ ಇದೆ. ಹೃದಯದ ಆರೋಗ್ಯಕ್ಕೆ, ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡುವುದಕ್ಕೆ ಕೂಡ ಇದು ಸಹಾಯಕಾರಿಯಂತೆ. ದೇಹದ ಆರೋಗ್ಯಕ್ಕೆ ಕಡಲೆ ಹಿಟ್ಟಿನ ಪ್ರಯೋಜನಗಳೆನು ಎಂಬುದನ್ನು ತಿಳಿಯೋಣ .

ಕಡಲೇ ಹಿಟ್ಟಿನಿಂದ ಮಾಡಿದ ಖಾದ್ಯಗಳನ್ನು ಸೇವಿಸುವುದರಿಂದ ಮಧುಮೇಹ ಕೂಡ ನಿಯಂತ್ರಿಸಬಹುದಂತೆ. ಕಡಲೇ ಹಿಟ್ಟಿನಿಂದ ರೋಟಿ, ಪರಾಟ ಕೂಡ ಮಾಡಬಹುದು. ಗೋಧಿ ಹಿಟ್ಟಿನ ಬದಲು ಇದನ್ನು ಉಪಯೋಗಿಸಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 ಇದರಲ್ಲಿ ನಾರಿನಾಂಶ ಜಾಸ್ತಿ ಇದೆ. ಕಡಲೇಹಿಟ್ಟಿನಿಂದ ಮಾಡಿದ ಆಹಾರ ಸೇವಿಸುವುದರಿಂದ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದಂತೆ.

ಇನ್ನು ತೂಕ ಇಳಿಸಿಕೊಳ್ಳುವವರಿಗೆ ಕೂಡ ಕಡಲೇಹಿಟ್ಟು ವರದಾನವಾಗಿದೆ. ಇದರಲ್ಲಿ ಕಾರ್ಬೋಹೈಡ್ರೇಟ್ ಕಡಿಮೆ ಇದೆ. ಪ್ರೋಟಿನ್ ಹೇರಳವಾಗಿದೆ. ವರ್ಕ್ ಔಟ್ ನಂತರ ಇದರಿಂದ ಮಾಡಿದ ಸ್ಮೂಥಿಯನ್ನು ಕುಡಿಯುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಇನ್ನು ಸೋಪು, ಫೇಸ್ ವಾಶ್ ಬದಲು ಕಡಲೇ ಹಿಟ್ಟಿನಿಂದ ಮುಖ ತೊಳೆಯುವುದರಿಂದ ಮೊಡವೆ, ಕಲೆ ಚುಕ್ಕಿಗಳ ಸಮಸ್ಯೆಯಿಂದ ಪಾರಾಗಬಹುದು. ಆಗಾಗ ಮುಖಕ್ಕೆ ಕಡಲೇ ಹಿಟ್ಟಿನ ಪ್ಯಾಕ್ ಹಚ್ಚಿಕೊಳ್ಳುವುದರಿಂದ ತ್ವಚೆಯ ಅಂದ ಹೆಚ್ಚುತ್ತದೆ.

ಇನ್ನು ಕಡಲೇಹಿಟ್ಟಿಗೆ ಮೊಟ್ಟೆ, ಎಸೆನ್ಸಿಯಲ್ ಆಯಿಲ್, ಸ್ವಲ್ಪ ಹಾಲು ಸೇರಿಸಿ ಮಿಶ್ರಣ ಮಾಡಿಕೊಂಡು ಇದನ್ನು ಹೇರ್ ಪ್ಯಾಕ್ ರೀತಿ ಹಚ್ಚಿಕೊಂಡರೆ ಹೊಳೆಯುವ ಕೂದಲು ನಿಮ್ಮದಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular