HomeLatest Newsಇಲ್ಲಿದೆ ಹಬ್ಬದ ಸಂಭ್ರಮ ಮರೆಯಾಗದಂತೆ 'ಪಟಾಕಿ' ಸಿಡಿಸಲು ಟಿಪ್ಸ್

ಇಲ್ಲಿದೆ ಹಬ್ಬದ ಸಂಭ್ರಮ ಮರೆಯಾಗದಂತೆ ‘ಪಟಾಕಿ’ ಸಿಡಿಸಲು ಟಿಪ್ಸ್

ದೀಪಾವಳಿಯಲ್ಲಿ ಪಟಾಕಿ ಹಚ್ಚುವುದು ಮಕ್ಕಳಿಗೆ ಹೆಚ್ಚಿನ ಖುಷಿ ಕೊಡುತ್ತದೆ. ಆದರೆ, ಎಚ್ಚರಿಕೆ ವಹಿಸದಿದ್ದರೆ ಗಂಭೀರ ಪರಿಣಾಮ ಬೀರುತ್ತದೆ.

ದೀಪಾವಳಿ ಹಬ್ಬದಲ್ಲಿ ಪಟಾಕಿ ಹಚ್ಚುವುದು ಸಾಮಾನ್ಯ. ಅದರಲ್ಲಿಯೂ ಮಕ್ಕಳಿಗೆ ಪಟಾಕಿ ಎಂದರೆ ಎಲ್ಲಿಲ್ಲದ ಪ್ರೀತಿ. ಪಟಾಕಿ ಹಚ್ಚುವ ಸಂದರ್ಭದಲ್ಲಿ ಅನೇಕರು ಕಣ್ಣಿಗೆ ಹಾನಿ ಮಾಡಿಕೊಳ್ಳುತ್ತಾರೆ. ಕೈ ಸುಟ್ಟುಕೊಳ್ಳುತ್ತಾರೆ. ಪಟಾಕಿ ಹಚ್ಚುವ ಸಂದರ್ಭದಲ್ಲಿ ಎಚ್ಚರಿಕೆ ವಹಿಸಬೇಕು.‌

 ಪಟಾಕಿ ಹಚ್ಚುವಾಗ ಆದಷ್ಟು ಕಾಟನ್ ಬಟ್ಟೆಗಳನ್ನು ಧರಿಸಿ. ಮನೆಯೊಳಗೆ ಪಟಾಕಿ ಸಿಡಿಸದೇ ಬಯಲು ಪ್ರದೇಶದಲ್ಲಿ ಪಟಾಕಿಯನ್ನು ಸಿಡಿಸಿ. ಕಡಿಮೆ ಶಬ್ದದ ಪಟಾಕಿಗಳನ್ನು ಸಿಡಿಸಿ. ಕಣ್ಣಿಗೆ ಕಿಡಿ ತಗುಲಿ ಹಾನಿಯಾದಲ್ಲಿ ತಕ್ಷಣವೇ ಆಸ್ಪತ್ರೆಗೆ ಹೋಗಿ.

ಉದ್ದನೆಯ ಊದು ಬತ್ತಿಯನ್ನು ಬಳಸಿಕೊಂಡು ಪಟಾಕಿ ಸಿಡಿಸುವುದು ಒಳ್ಳೆಯದು. ಬೆಂಕಿ ಸಮೀಪದ ಸ್ಥಳದಲ್ಲಿ ಪಟಾಕಿ ಇಡುವುದು ಒಳ್ಳೆಯದಲ್ಲ. ಕೈಯಲ್ಲಿ ಪಟಾಕಿ ಸಿಡಿಸದೇ ದೂರದಿಂದ ಪಟಾಕಿ ಸಿಡಿಸುವುದು ಒಳ್ಳೆಯದು. ಅರ್ಧ ಸುಟ್ಟ ಪಟಾಕಿಯನ್ನು ಕೈನಿಂದ ಎತ್ತಿ ಹಾಕಲು ಹೋಗಬೇಡಿ. ಮಕ್ಕಳು ಪಟಾಕಿ ಸಿಡಿಸುವಾಗ ಪೋಷಕರು ಜೊತೆಗಿರಲಿ. ಸುರಕ್ಷತೆಗೆ ಆದ್ಯತೆ ನೀಡಿ. ಇಲ್ಲವಾದರೆ, ಹಬ್ಬದ ಸಂಭ್ರಮ ಮರೆಯಾಗಿ ಆಸ್ಪತ್ರೆ ಬಾಗಿಲು ಕಾಯಬೇಕಾದೀತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular