ಮಳೆಗಾಲ ಹಾಗೂ ಬೇಸಿಗೆ ಕಾಲದಲ್ಲಿ ಸೋಂಕು ಹೆಚ್ಚಾಗಿ ಕಾಡುತ್ತದೆ. ಮಹಿಳೆಯರಿಗೆ ಹೆಚ್ಚಾಗಿ ಮೂತ್ರ ಸೋಂಕಿನ ಸಮಸ್ಯೆ ಕಾಡುತ್ತದೆ. ಇದನ್ನು ನಿರ್ಲಕ್ಷ್ಯಿಸಲು ಸಾಧ್ಯವಿಲ್ಲ. ಸ್ವಚ್ಛವಿಲ್ಲದ ಹಾಗೂ ಸಾರ್ವಜನಿಕ ಶೌಚಾಲಯ ಬಳಕೆಯಿಂದ ಇದು ಹೆಚ್ಚಾಗುತ್ತದೆ.
ಮೂತ್ರ ಸೋಂಕು ಅಪಾಯಕ್ಕೆ ದಾರಿ ಮಾಡಬಹುದು. ಈ ಸಮಸ್ಯೆ ಕಾಡುವವರು ಅತಿ ಹೆಚ್ಚು ನೀರಿನ ಸೇವನೆ ಮಾಡಬೇಕು. ಮಹಿಳೆಯರು ಮಾಡುವ ಕೆಲ ತಪ್ಪುಗಳು ಮೂತ್ರ ಸೋಂಕಿಗೆ ಕಾರಣವಾಗುತ್ತದೆ.
ಮೂತ್ರವನ್ನು ದೀರ್ಘ ಸಮಯ ಹಿಡಿದಿಟ್ಟುಕೊಳ್ಳುವುದು, ದ್ರವ ಆಹಾರವನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸುವುದು, ಕಾಫಿ ಹಾಗೂ ಮದ್ಯಪಾನ ಕೂಡ ಮೂತ್ರದ ಸೋಂಕಿಗೆ ಕಾರಣವಾಗುತ್ತದೆ. ಮುಟ್ಟಿನ ಸಮಯದಲ್ಲಿ ಸ್ವಚ್ಛತೆ ಕೊರತೆ, ಮೂತ್ರ ವಿಸರ್ಜನೆ ನಂತ್ರ ಖಾಸಗಿ ಅಂಗವನ್ನು ಸ್ವಚ್ಛಗೊಳಿಸಿಕೊಳ್ಳದಿರುವುದು ಹಾಗೂ ಒಂದೇ ಪ್ಯಾಡನ್ನು ತುಂಬಾ ಸಮಯ ಧರಿಸುವುದು ಮೂತ್ರದ ಸೋಂಕಿಗೆ ಕಾರಣವಾಗುತ್ತದೆ.
ಪದೇ ಪದೇ ಮೂತ್ರ ವಿಸರ್ಜನೆ, ಮೂತ್ರ ವಿಸರ್ಜನೆ ವೇಳೆ ಉರಿ, ನೋವು, ಮೂತ್ರದ ಬಣ್ಣ ಬದಲಾವಣೆ, ಮಲ ವಿಸರ್ಜನೆ ವೇಳೆ ನೋವು, ಮಲದಲ್ಲಿ ರಕ್ತ, ಹೊಟ್ಟೆ ಕೆಳಭಾಗದಲ್ಲಿ ನೋವು, ಶೀತ, ಜ್ವರ, ತೀವ್ರ ಬೆನ್ನು ನೋವು ಹಾಗೂ ಆಯಾಸ, ತಲೆ ತಿರುಗುವುದು ಮೂತ್ರ ಸೋಂಕಿನ ಲಕ್ಷಣವಾಗಿದೆ.