ದೀಪಾವಳಿ ಹತ್ತಿರ ಬರ್ತಿದೆ. ಹೊಸ ರುಚಿ ಬೇಕೆನ್ನುವವರು ಸುಲಭವಾಗಿ, ಆರೋಗ್ಯಕರ ಕ್ಯಾರೆಟ್ ಲಾಡು ಮಾಡಬಹುದು.
ಕ್ಯಾರೆಟ್ ಲಾಡಿಗೆ ಬೇಕಾಗುವ ಪದಾರ್ಥ :
ಕ್ಯಾರೆಟ್ : 500 ಗ್ರಾಂ
ಸಕ್ಕರೆ : 100 ಗ್ರಾಂ
ತುಪ್ಪ : 3 ಚಮಚ
ಏಲಕ್ಕಿ ಪುಡಿ : 1 ಚಮಚ
ಗೋಡಂಬಿ : ಸಣ್ಣಗೆ ಕತ್ತರಿಸಿದ್ದು 1 ಚಮಚ
ಒಣ ದ್ರಾಕ್ಷಿ – 3-6
ತೆಂಗಿನ ತುರಿ : 1 ಕಪ್
ಕ್ಯಾರೆಟ್ ಲಾಡು ಮಾಡುವ ವಿಧಾನ :
ಕ್ಯಾರೆಟ್ ಸಿಪ್ಪೆ ತೆಗೆದು ತುರಿದುಕೊಳ್ಳಿ. ಒಂದು ಪಾತ್ರೆಗೆ ತುಪ್ಪ ಹಾಕಿ, ಬಿಸಿಯಾದ್ಮೇಲೆ ಕ್ಯಾರೆಟ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಸ್ವಲ್ಪ ಹುರಿಯಿರಿ. ಕ್ಯಾರೆಟ್ ತುರಿಯ ಹಸಿ ವಾಸನೆ ಹೋಗ್ತಿದ್ದಂತೆ ತೆಂಗಿನ ತುರಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಇದ್ರ ಜೊತೆ ಏಲಕ್ಕಿ ಪುಡಿಯನ್ನು ಹಾಕಿ. ತೆಂಗಿನ ತುರಿ ಹಸಿ ವಾಸನೆ ಹೋದ್ಮೇಲೆ ಸಕ್ಕರೆಯನ್ನು ಹಾಕಿ ಚೆನ್ನಾಗಿ ಕೈ ಆಡಿಸಿ. ಮಿಶ್ರಣ ಲಾಡು ಕಟ್ಟಲು ಬರ್ತಿದೆ ಎನ್ನಿಸುವಾಗ ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿಯನ್ನು ಹಾಕಿ, ಗ್ಯಾಸ್ ಬಂದ್ ಮಾಡಿ. ನಂತ್ರ ಮಿಶ್ರಣವನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ.