ಮಾವಿನಹಣ್ಣು : 120 ಗ್ರಾಂ
ದುಂಡು ಮೆಣಸಿನಕಾಯಿ : 1
ಸೌತೆಕಾಯಿ : 30 ಗ್ರಾಂ
ಈರುಳ್ಳಿ : 10 ಗ್ರಾಂ
ನಿಂಬೆರಸ : 2 ಚಮಚ
ಆರೆಂಜ್ ಜ್ಯೂಸ್ : ಅರ್ಧ ಕಪ್
ಪಾರ್ಸ್ಲಿ : 5 ಗ್ರಾಂ
ಬ್ರೆಡ್ : 2 (ಕತ್ತರಿಸಿದ್ದು)
ಎಕ್ಸ್ಟ್ರಾ ವರ್ಜಿನ್ ಆಲೀವ್ ಆಯಿಲ್ : 30 ಎಂ. ಎಲ್
ಉಪ್ಪು ರುಚಿಗೆ ತಕ್ಕಷ್ಟು
ಕರಿಮೆಣಸು ಚಿಟಿಕೆಯಷ್ಟು
ಮಾಡುವ ವಿಧಾನ
ಮಾವಿನ ಹಣ್ಣಿನ ಸಿಪ್ಪೆ ಸುಲಿದು ಕತ್ತರಿಸಿಡಿ. ಈರುಳ್ಳಿಯ ಸಿಪ್ಪೆ ಸುಲಿದು ಕತ್ತರಿಸಿಡಿ. ಹಳದಿ ಬಣ್ಣದ ದುಂಡು ಮೆಣಸಿನಕಾಯಿ ತೊಳೆದು ಕತ್ತರಿಸಿ. ಸೌತೆಕಾಯಿಯ ಬೀಜ ತೆಗೆದು ಕತ್ತರಿಸಿ. ಪಾರ್ಸ್ಲಿಯನ್ನು ತೊಳೆದು ಕತ್ತರಿಸಿಡಿ.
ಒಂದು ದೊಡ್ಡ ಬೌಲ್ ಗೆ ಆಲೀವ್ ಎಣ್ಣೆ, ನಿಂಬೆ ರಸ ಹಾಕಿ. ಅದರಲ್ಲಿ ಮಾವಿನ ಹಣ್ಣಿನ ತಿರುಳು, ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ, ದುಂಡು ಮೆಣಸಿನ ಕಾಯಿ, ಸೌತೆಕಾಯಿ, ಪಾರ್ಸ್ಲಿ, ಬ್ರೆಡ್ ಚೂರುಗಳು, ಕಿತ್ತಳೆ ರಸ ಹಾಕಿ 2 ಗಂಟೆ ಇಡಿ.
ನಂತರ ನೆನೆಸಿಟ್ಟ ಮಿಶ್ರಣವನ್ನು ಗ್ರೈಂಡ್ ಮಾಡಿ. ನಂತರ ಸೋಸಿ ಅದಕ್ಕೆ ಕರಿಮೆಣಸಿನ ಪುಡಿ, ಉಪ್ಪು ಹಾಕಿ ಮಿಕ್ಸ್ ಮಾಡಿ. ಬೇಕಾದರೆ ಒಗ್ಗರಣೆ ಹಾಕಬಹುದು. ನಂತರ ಈ ಮಿಶ್ರಣವನ್ನು ಅರ್ಧ ಗಂಟೆ ಫ್ರಿಜ್‌ನಲ್ಲಿಟ್ಟು ಸವಿಯಿರಿ.