ನಾವು ವಿಶೇಷ ಸಂದರ್ಭಗಳಲ್ಲಿ, ಹಬ್ಬ- ಹರಿದಿನಗಳಲ್ಲಿ, ಸಭೆ ಸಮಾರಂಭಗಳಲ್ಲಿ ಹೆಚ್ಚಾಗಿ ಅಲಂಕಾರಕ್ಕೆ ಬಳಸುವುದು ಚಂಡು ಹೂ. ಈ ಹೂವಿನಿಂದ ಅಲಂಕಾರ ಮಾಡಿದರೆ ಮೆರಗು ಹೆಚ್ಚುತ್ತದೆ. ಆದರೆ ಈ ಚಂಡು ಹೂ ಅಲಂಕಾರಕ್ಕೆ ಮಾತ್ರವಲ್ಲ, ಆರೋಗ್ಯಕ್ಕೂ ಸಹ ಉತ್ತಮವಾಗಿ ಬಳಕೆಯಾಗುತ್ತದೆ. ಇದರಿಂದಾಗುವ ಆರೋಗ್ಯಕರ ಲಾಭಗಳು ಇಲ್ಲಿವೆ ನೋಡಿ.
* ಚಂಡು ಹೂವಿನ ಪೇಸ್ಟ್ ಅನ್ನು ಮುಖಕ್ಕೆ ಹಚ್ಚುವುದರಿಂದ ಮೊಡವೆಗಳು ಹಾಗೂ ಮೊಡವೆಯಿಂದಾದ ಕಲೆಗಳು ಮಾಯವಾಗುತ್ತವೆ. ಮತ್ತು ಸನ್ ಬರ್ನ್ ಕೂಡ ಕಡಿಮೆಯಾಗುತ್ತದೆ.
* ಚಂಡು ಹೂವನ್ನ ಒಣಗಿಸಿ ಅದರ ಪುಡಿಯ ಸಹಾಯದಿಂದ ಚಹಾವನ್ನು ಮಾಡಿ ಕುಡಿದರೆ ಮಹಿಳೆಯರಿಗೆ ಮುಟ್ಟಿನ ದಿನದಲ್ಲಿ ಕಾಡುವ ಹೊಟ್ಟೆ ನೋವು, ಸ್ನಾಯುಗಳ ಸೆಳೆತ ಇವೆಲ್ಲವೂ ಕಡಿಮೆಯಾಗುತ್ತವೆ.
* ಚಂಡು ಹೂವನ್ನು ನೀರಿನಲ್ಲಿ ನೆನೆಸಿ 2-3 ಗಂಟೆಗಳ ಬಳಿಕ ಆ ನೀರನ್ನು ಸೇವಿಸಿದರೆ ಹೊಟ್ಟೆಯಲ್ಲಿರುವ ಜಂತುಗಳು ಮಾಯವಾಗುತ್ತವೆ.
* ಚಂಡು ಹೂವಿನ ಎಣ್ಣೆ ಹಾಗೂ ಹೂವಿನ ರಸ ಬೆರೆಸಿ ಗಾಯಗಳ ಮೇಲೆ ಹಚ್ಚಿದರೆ ಗಾಯ ಬೇಗ ವಾಸಿಯಾಗುತ್ತದೆ.
* ಚಂಡು ಹೂವಿನ ಟಿಂಚರ್ ಬಳಸಿ ಬಾಯಿ ಮುಕ್ಕಳಿಸುವುದರಿಂದ ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ.