ಅಂಗೈ ನೋಡಿ ಅಥವಾ ಜಾತಕ ನೋಡಿ ತಜ್ಞರು, ನಿಮ್ಮ ಆರೋಗ್ಯ ಪರಿಸ್ಥಿತಿಯನ್ನು ಹೇಳ್ತಾರೆ. ಆದ್ರೆ ಜಾತಕ, ಅಂಗೈ ನೋಡಿಯಲ್ಲ ನಿಮ್ಮ ಜನ್ಮ ದಿನಾಂಕದ ಮೂಲಕವೂ ನಿಮ್ಮ ಆರೋಗ್ಯ ಹೇಗಿರಲಿದೆ ಎಂಬುದನ್ನು ನೀವು ತಿಳಿದುಕೊಳ್ಳಬಹುದು.
ಯಾರ ಜನ್ಮದ ಮೂಲಾಂಕ ಒಂದಾಗಿರುತ್ತದೆಯೋ ಅವ್ರಿಗೆ ರಕ್ತದೊತ್ತಡ, ಹೃದಯ ಮತ್ತು ಕಣ್ಣಿನ ಕಾಯಿಲೆ ಕಾಡುತ್ತದೆ. ಒಂದು ಮೂಲಾಂಕ ಹೊಂದಿರುವವರು ಹೃದಯದ ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡಬೇಕು.
ಮೂಲಾಂಕ ಎರಡಾಗಿದ್ದರೆ ಉಸಿರಾಟದ ಸಮಸ್ಯೆ ಕಾಡುತ್ತದೆ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಪಚನ ಶಕ್ತಿ ದುರ್ಬಲವಾಗಿರುತ್ತದೆ. ಮಲಬದ್ಧತೆ ಕಾಡುತ್ತದೆ. ಕಿವಿಯಲ್ಲೂ ಸಮಸ್ಯೆಯಿರುತ್ತದೆ. ಟ್ಯೂಮರ್ ಆಗುವ ಸಾಧ್ಯತೆ ಹೆಚ್ಚು.
ಮೂಲಾಂಕ ಮೂರಾಗಿದ್ದರೆ ಉದ್ವೇಗ, ಮಾನಸಿಕ ಗೊಂದಲ, ಕೋಪ ಹೆಚ್ಚು. ರೋಗನಿರೋಧಕ ಶಕ್ತಿ ಕಡಿಮೆ ಇರುವ ಜೊತೆಗೆ ಚರ್ಮ ಕಾಯಿಲೆ ಕಾಡುತ್ತೆ.
ಮೂಲಾಂಕ ನಾಲ್ಕಾಗಿದ್ದರೆ ಖಿನ್ನತೆ, ಮಾನಸಿಕ ಒತ್ತಡ, ಮೈಗ್ರೇನ್, ಹೃದ್ರೋಗ, ಪಿತ್ತಕೋಶ ಹಾಗೂ ಮೂತ್ರಕ್ಕೆ ಸಂಬಂಧಿಸಿದ ಸಮಸ್ಯೆ ಕಾಡುತ್ತದೆ. ಉದ್ವಿಗ್ನತೆ ಹೆಚ್ಚಾಗುವ ಕಾರಣ ಅನೇಕ ರೋಗಗಳು ಆಗಾಗ ಕಾಡುತ್ತವೆ.
ಮೂಲಾಂಕ ಐದಾಗಿದ್ದರೆ ನರ ದೌರ್ಬಲ್ಯ ಉಂಟಾಗುತ್ತದೆ. ರಕ್ತದೊತ್ತಡ ಹೆಚ್ಚುತ್ತದೆ. ನಿದ್ರಾಹೀನತೆ, ಉದ್ವೇಗ, ಕಣ್ಣಿನ ಸಮಸ್ಯೆ ಪಾರ್ಶ್ವವಾಯು ಕಾಡುತ್ತದೆ.
ಮೂಲಾಂಕ ಆರಾಗಿದ್ದರೆ ಸೈನಸ್, ಕೆಮ್ಮು, ಮೂಗು ಅಥವಾ ಶ್ವಾಸಕೋಶದ ತೊಂದರೆಗಳು, ಹೃದಯ ಪರಿಚಲನೆ ಮತ್ತು ರಕ್ತ ಪರಿಚಲನೆಯ ತೊಂದರೆ ಕಾಡುತ್ತದೆ. ನಿದ್ರಾಹೀನತೆ ಕಾಡುವುದು ಹೆಚ್ಚು.
ಮೂಲಾಂಕ ಏಳಾಗಿದ್ದರೆ ರಕ್ತದ ಸಮಸ್ಯೆ ಕಾಡುತ್ತದೆ. ಮೊಡವೆ, ಗುಳ್ಳೆ, ಜೀರ್ಣಶಕ್ತಿ ಸಮಸ್ಯೆ ಹೆಚ್ಚು.
ಮೂಲಾಂಕ ಎಂಟಾಗಿದ್ದರೆ ತಲೆನೋವು, ಕುತ್ತಿಗೆ ಅಥವಾ ಕೀಲು ನೋವು ಕಾಡುತ್ತದೆ. ಹಲ್ಲಿನ ಸಮಸ್ಯೆ ಕಾಡುತ್ತದೆ. ಲಿವರ್ ಗೆ ಸಂಬಂಧಿಸಿದ ಸಮಸ್ಯೆ ಹೆಚ್ಚು.
ಮೂಲಾಂಕ 9 ಆಗಿದ್ದರೆ ಸೋಂಕಿಗೆ ಸಂಬಂಧಿಸಿದ ಸಮಸ್ಯೆ ಹೆಚ್ಚು ಕಾಡುತ್ತದೆ. ದಡಾರ, ಜ್ವರ, ರಕ್ತದ ಕೊರತೆ ಜೊತೆ ಚರ್ಮದ ಸಮಸ್ಯೆ ಕಾಡುತ್ತದೆ.