ಕುದಿಸಿದ ನೀರಿನಿಂದ ಬರುವ ಆವಿಗೆ ಟವಲ್ ಹಿಡಿದು ಅದರಿಂದ ಮಗುವಿನ ಮೈಯನ್ನು ಮೆಲ್ಲನೆ ಒತ್ತಬೇಕು. ಅಥವಾ ನೀರಿಗೆ ಅಮೃತಾಂಜನ ಹಾಕಿ ಕುದಿಸಿದಾಗ ಬರುವ ಆವಿಗೆ ಬಟ್ಟೆಯನ್ನು ಹಿಡಿದು ಮಗುವಿನ ಮೈಗೆ, ಎದೆ, ಬೆನ್ನಿನ ಭಾಗಕ್ಕೆ ಮೆಲ್ಲನೆ ಒತ್ತಬೇಕು. ಆಗ ಮೂಗು ಕಟ್ಟಿದ್ದರೆ ಮಗುವಿಗೆ ಸ್ವಲ್ಪ ಸಮಾಧಾನ ಸಿಗುತ್ತದೆ.
ಜೇನು, ಕರಿಮೆಣಸಿನ ಪುಡಿ ಮತ್ತು ತುಳಸಿ
ಅರ್ಧ ಚಮಚ ಜೇನಿಗೆ 1-2 ಕರಿ ಮೆಣಸಿನ ಪುಡಿ (6 ತಿಂಗಳ ಮೇಲಿನ ಮಕ್ಕಳಿಗಾದರೆ 3-4 ಕರಿಮೆಣಸಿನ ಪುಡಿ ಹಾಕಬಹುದು) ಮತ್ತು ತುಳಸಿ ರಸ ಇವುಗಳನ್ನು ಮಿಶ್ರ ಮಾಡಿ ಕುಡಿಸಿದರೆ ಕೆಮ್ಮು ಕಮ್ಮಿಯಾಗುವುದು.
ಅರಿಶಿಣ
ಅರಿಶಿಣ ಪುಡಿಯನ್ನು ಬಿಸಿ ಮಾಡಿ ಅದನ್ನು ಎದೆಗೆ ಉಜ್ಜಿ ಹಾಲು ಕುಡಿಸಬೇಕು ಅಥವಾ ಹಾಲಿನ ಬಾಟಲಿಯ ನಿಪ್ಪಲ್‌ಗೆ ಉಜ್ಜಿ ಹಾಲು ಕುಡಿಸಬೇಕು. ಈ ರೀತಿ ದಿನಕ್ಕೆ 2 ಬಾರಿ ಮಾಡಿದರೆ ಕೆಮ್ಮು ಕಡಿಮೆಯಾಗುತ್ತದೆ.
ಎಣ್ಣೆ ಮಸಾಜ್
ನೀಲ್‌ಗಿರಿ, ರೋಸ್‌ಮೆರಿ ಎಣ್ಣೆ, ಪುದೀನಾ ಎಣ್ಣೆ, ಪೆಪ್ಪರ್ ಮಿಂಟ್ ಆಯಿಲ್ ಇವುಗಳಿಂದ ಮಸಾಜ್ ಮಾಡಿದರೆ ಶೀತ ಮತ್ತು ಕೆಮ್ಮಿನಿಂದ ಮೂಗು ಕಟ್ಟುವ ಸಮಸ್ಯೆ ನಿವಾರಣೆಯಾಗುತ್ತದೆ. ನಂತರ ಮಗುವಿಗೆ ಉಣ್ಣೆಯ ಬಟ್ಟೆ ಧರಿಸಬೇಕು. ಈ ರೀತಿ ಮಾಡಿದರೆ ಕೆಮ್ಮು ಕಮ್ಮಿಯಾಗುವುದು.