ಹಲ್ಲುಗಳು ನಿತ್ಯ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಹಾಗಾಗಿ ಅವುಗಳ ರಕ್ಷಣೆ ಅಷ್ಟೇ ಅಗತ್ಯ.
ಅದಕ್ಕಾಗಿ ಕೆಲವೊಂದು ಕ್ರಮಗಳನ್ನು ಅನುಸರಿಸಿದರೆ ಹಲ್ಲುಗಳ ಸ್ವಾಸ್ಥ್ಯ ಕಾಪಾಡಿಕೊಳ್ಳಬಹುದು. ಹೇಗೆ ಅಂತ ತಿಳಿದುಕೊಳ್ಳೋಣ.
* ಹುಳುಕು ಹಲ್ಲಿನಿಂದಾಗಿ ನೋವು ಬರುತ್ತಿದ್ದರೆ ನಿಯಮಿತವಾಗಿ ಲವಂಗ ಜಗಿಯುವುದನ್ನು ಅಭ್ಯಾಸ ಮಾಡಿಕೊಂಡರೆ ನೋವು ಅಲ್ಪಮಟ್ಟಿಗೆ ಕಡಿಮೆಯಾಗುತ್ತದೆ.
* ಹಲ್ಲಿನಲ್ಲಿ ಉಪ್ಪಿನಂಶ ಕಡಿಮೆ ಇದ್ದರೆ ನೋವು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಮೂರು ದಿನಕ್ಕೊಮ್ಮೆ ಉಗುರು ಬೆಚ್ಚಗಿನ ನೀರಿಗೆ ಉಪ್ಪು ಹಾಕಿಕೊಂಡು ಬಾಯಿ ತೊಳೆಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.
* ಹಲ್ಲು ನೋವು ಬಂದಾಗ ಬೆಳ್ಳುಳ್ಳಿಯನ್ನು ಕಲ್ಲುಪ್ಪಿನೊಂದಿಗೆ ಸೇರಿಸಿಕೊಂಡು ತಿಂದರೆ ಕ್ಷಣಾರ್ಧದಲ್ಲಿಯೇ ನೋವು ಮಾಯವಾಗುತ್ತದೆ. ಅದರೊಂದಿಗೆ ಬಾಯಲ್ಲಿ ಅನಗತ್ಯ ಬ್ಯಾಕ್ಟೀರಿಯಾಗಳಿದ್ದರೆ ಸತ್ತು ಹೋಗುತ್ತವೆ.
* ಅರಿಶಿಣವನ್ನು ಬಿಸಿನೀರಿಗೆ ಮಿಶ್ರಣ ಮಾಡಿ ಕುಡಿಯುವುದರಿಂದ ಹಲ್ಲುಗಳಿಗೆ ಸೋಂಕು ಉಂಟಾಗುವುದು ತಪ್ಪುತ್ತದೆ.
* ಬೇವಿನ ಎಲೆಯನ್ನು ಜಗಿಯುವುದರಿಂದ ಹಲ್ಲು ಹಾಗೂ ವಸಡಿಗೆ ತೊಂದರೆ ಕೊಡುವ ಬ್ಯಾಕ್ಟೀರಿಯಾಗಳಿದ್ದರೆ ಸಂಪೂರ್ಣವಾಗಿ ಸತ್ತು ಹೋಗುತ್ತವೆ.
* ವಾರಕ್ಕೊಮ್ಮೆಯಾದರೂ ಬೇವಿನ ಕಡ್ಡಿಯಿಂದ ಹಲ್ಲು ಉಜ್ಜಿದರೆ ಹಲ್ಲುಗಳು ಗಟ್ಟಿಯಾಗುವುದರ ಜೊತೆಗೆ ಆರೋಗ್ಯವಾಗಿರುತ್ತವೆ.