ವಿಶ್ವದಲ್ಲಿ ಕೆಲವರು ರಸ್ತೆಯಲ್ಲಿ ಬಿದ್ದ ಪ್ರತಿಯೊಂದು ವಸ್ತುವನ್ನೂ ತೆಗೆದುಕೊಳ್ತಾರೆ. ಮತ್ತೆ ಕೆಲವರು ರಸ್ತೆ ಮೇಲೆ ಬಿದ್ದ ವಸ್ತುವನ್ನು ಗಮನಿಸುವುದಿಲ್ಲ. ರಸ್ತೆಯಲ್ಲಿ ಬಿದ್ದ ಕೆಲ ವಸ್ತು ಶುಭ ತಂದ್ರೆ ಮತ್ತೆ ಕೆಲವು ಅಶುಭಕ್ಕೆ ಕಾರಣವಾಗುತ್ತವೆ.
ಕೆಲವೊಮ್ಮೆ ರಸ್ತೆಯಲ್ಲಿ ಕೂದಲುಗಳು ಸಿಗುತ್ತವೆ. ಇದನ್ನು ತಾಗಿಸಿಕೊಳ್ಳದೆ ದೂರದಿಂದ ಹೋಗುವುದು ಒಳ್ಳೆಯದು. ರಸ್ತೆಯಲ್ಲಿ ಬಿದ್ದ ಕೂದಲನ್ನು ಅಪವಿತ್ರವೆನ್ನಲಾಗುತ್ತದೆ.
ರಸ್ತೆಯಲ್ಲಿ ಮುಳ್ಳುಗಳು ಬಿದ್ದಿದ್ರೆ ಅದ್ರಿಂದ ದೂರ ಹೋಗುವುದು ಒಳ್ಳೆಯದು. ಅದು ಕಾಲುಗಳಿಗೆ ಚುಚ್ಚುವ ಸಾಧ್ಯತೆಯಿರುತ್ತದೆ. ಸಾಧ್ಯವಾದ್ರೆ ಅದನ್ನು ಎತ್ತಿ ರಸ್ತೆ ಬದಿಗೆ ಹಾಕಬೇಕು.
ರಸ್ತೆಯಲ್ಲಿ ಸ್ನಾನ ಮಾಡಿದ ನೀರು ನಿಂತಿದ್ದರೆ ಅದನ್ನು ಮುಟ್ಟಬೇಡಿ. ಅದನ್ನು ದಾಟಿ ಹೋಗುವುದು ಕೂಡ ಅಶುಭ. ಸ್ನಾನ ಮಾಡಿದ ನೀರು ಅಶುಭವಾಗಿರುತ್ತದೆ. ಹಾಗಾಗಿ ದಾಟಬಾರದು ಎನ್ನಲಾಗುತ್ತದೆ.
ಕೆಲವೊಮ್ಮೆ ರಸ್ತೆಯಲ್ಲಿ ಪ್ರಾಣಿಗಳ ಶವ ಬಿದ್ದಿರುತ್ತದೆ. ಇಲ್ಲವೆ ಪ್ರಾಣಿಗಳ ಎಲುಬು ಬಿದ್ದಿರುತ್ತದೆ. ಅದ್ರ ಹತ್ತಿರಕ್ಕೆ ಹೋಗಬಾರದು. ಅದನ್ನು ಮುಟ್ಟಿದ್ರೆ ಅಥವಾ ದಾಟಿಕೊಂಡು ಹೋದ್ರೆ ದೊಡ್ಡ ಸಂಕಟ ಎದುರಾಗುತ್ತದೆ.