ಬೆಳಗ್ಗೆ ಎದ್ದ ಕೂಡಲೇ ಒಂದ್ ಕಪ್ ಬಿಸಿ ಬಿಸಿ ಕಾಫಿ ಕುಡಿದರೆ ಸಾಕು ನಿದ್ರೆ ಹೋಗಿ, ಮೈಂಡ್ ಫ್ರೆಶ್ ಆಗುತ್ತೆ. ಆದ್ರೆ ಈ ಕಾಫಿ ಪಾನೀಯ ಮಾತ್ರವಲ್ಲ. ಸೌಂದರ್ಯಕ್ಕೂ ಉಪಯೋಗವಾಗುತ್ತೆ.
ಬ್ಯೂಟಿ ಪಾರ್ಲರ್ ಗೆ ಹೋಗಿ ಸಾವಿರಾರು ರೂಪಾಯಿ ಹಣ ವ್ಯರ್ಥ ಮಾಡೋ ಬದಲು ಮನೆಯಲ್ಲಿ ಕಾಫಿ ಪುಡಿಯಿಂದ ಸೌಂದರ್ಯ ವೃದ್ಧಿಸಿಕೊಳ್ಳಬಹುದು.
ಮೊದಲಿಗೆ ಒಂದು ಸ್ಪೂನ್ ಕಾಫಿ ಪುಡಿಗೆ ಸ್ವಲ್ಪ ರೋಸ್ ವಾಟರ್ ಹಾಕಿ ಕಲಸಿಕೊಂಡು ಮುಖಕ್ಕೆ ಹಚ್ಚಿ ಮಸಾಜ್ ಮಾಡಿ.
ನಂತರ ಮುಖ ತೊಳೆದುಕೊಳ್ಳಿ. ಇದ್ರಿಂದ ಫೇಸ್ ಕ್ಲೀನ್ ಆಗುತ್ತೆ. ನಂತರ ಮತ್ತೊಂದು ಚಮಚ ಕಾಫಿ ಪುಡಿ ತೆಗೆದುಕೊಂಡು ಅದಕ್ಕೆ ಅರ್ಧ ಚಮಚ ಸಕ್ಕರೆ, ಒಂದು ಸ್ಪೂನ್ ಜೇನು ತುಪ್ಪ, ಅರ್ಧ ನಿಂಬೆ ಹಣ್ಣು ಹಾಕಿ ಕಲಸಿ ಮುಖಕ್ಕೆ ಸ್ಕ್ರಬ್ ಮಾಡಿ ಎರಡು ನಿಮಿಷ ಬಿಟ್ಟು ಮುಖ ತೊಳೆಯಿರಿ.
ಇದಾದ ಬಳಿಕ ಕೊನೆಯ ಹಂತವಾಗಿ ಮತ್ತೊಂದು ಸ್ಪೂನ್ ಕಾಫಿ ಪುಡಿಗೆ ಒಂದು ಚಮಚ ಅಕ್ಕಿ ಹಿಟ್ಟು, ಒಂದು ಚಮಚ ಜೇನುತುಪ್ಪ ಸೇರಿಸಿ, ಮುಖಕ್ಕೆ ಪ್ಯಾಕ್ ಹಾಕಿ. ಪ್ಯಾಕ್ ಡ್ರೈ ಆಗುವವರೆಗೂ ಬಿಟ್ಟು, ನಂತರ ತಣ್ಣೀರಲ್ಲಿ ಮುಖ ತೊಳೆಯಿರಿ. ವಾರಕ್ಕೆ ಎರಡು ದಿನ ಈ ರೀತಿ ಮಾಡುವುದರಿಂದ ಚರ್ಮದ ಕಾಂತಿ ಹೆಚ್ಚಲಿದೆ.