ರಾತ್ರಿ ವೇಳೆ ಹಣ್ಣುಗಳನ್ನು ತಿನ್ನಬೇಕು ಎಂದಾದರೆ ಆಗ ಮಾವಿನ ಹಣ್ಣು ಸೇವಿಸಿ. ಇದರಲ್ಲಿನ ಸಿಹಿ ರುಚಿಯು ಹಸಿವನ್ನು ಕಡಿಮೆ ಮಾಡುವುದು ಮತ್ತು ದೇಹವನ್ನು ಆರೋಗ್ಯವಾಗಿಯೂ ಇಡುವುದು.
ಮಾವಿನ ಹಣ್ಣಿನ ಸೇವನೆ ಮಾಡುವುದರಿಂದ ಹಲವಾರು ರೀತಿಯ ಲಾಭಗಳು ದೇಹಕ್ಕೆ ಸಿಗಲಿದೆ. ಆ ಲಾಭಗಳು ಯಾವುದು ಅಂತ ನೋಡಿ.
ಜೀರ್ಣಕ್ರಿಯೆ ವ್ಯವಸ್ಥೆಯು ಆರೋಗ್ಯವಾಗಿ ಇರುವುದು. ದೇಹದ ಆರೋಗ್ಯಕ್ಕೆ ಅತೀ ಅಗತ್ಯವಾಗಿ ಇರುವುದು. ರಾತ್ರಿ ವೇಳೆ ಮಾವಿನ ಹಣ್ಣು ಸೇವನೆ ಮಾಡಿದರೆ, ಆಗ ಜೀರ್ಣಕ್ರಿಯೆ ಪ್ರಕ್ರಿಯೆಯು ಉತ್ತೇಜನಗೊಳ್ಳುವುದು. ಇದರಿಂದಾಗಿ ಬೆಳಗ್ಗೆ ಯಾವುದೇ ರೀತಿಯ ಜೀರ್ಣಕ್ರಿಯೆ ಸಮಸ್ಯೆಯು ಕಾಣಿಸದು. ಹೊಟ್ಟೆಯಲ್ಲಿ ಕೂಡ ಯಾವುದೇ ತೊಂದರೆ ಆಗದು.
ಮಾವಿನ ಹಣ್ಣುಗಳಲ್ಲಿ ಕ್ಯಾಲರಿ ತುಂಬಾ ಕಡಿಮೆ ಇರುವುದು. ಒಂದು ತುಂಡು ಮಾವಿನ ಹಣ್ಣು ಸೇವಿಸಿದರೆ, ತೂಕದ ಮೇಲೆ ಇದು ಯಾವುದೇ ಪರಿಣಾಮ ಬೀರದು. ರಾತ್ರಿ ವೇಳೆ ಸೇವಿಸಿದರೂ ಅದರಿಂದ ಯಾವುದೇ ಅಡ್ಡ ಪರಿಣಾಮ ಆಗದು. ಅನಾರೋಗ್ಯಕಾರಿ ಸಕ್ಕರೆ ಮತ್ತು ಅಧಿಕ ಕ್ಯಾಲರಿ ಅಂಶ ಇರುವಂತಹ ಆಹಾರ ಸೇವನೆಗಿಂತ ಮಾವಿನ ಹಣ್ಣು ತುಂಬಾ ಒಳ್ಳೆಯದು.