ಪಾಯಸ ಎಲ್ಲರ ಫೇವರೆಟ್ ಸಿಹಿ ತಿನಿಸು. ವಿಶೇಷ ಸಮಾರಂಭಗಳಲ್ಲಿ ಪಾಯಸ ಇಲ್ಲದೆ ಹೋದರೆ ಊಟ ಪರಿಪೂರ್ಣವಾಗುವುದಿಲ್ಲ.
ಪ್ರತಿ ಬಾರಿ ಒಂದೇ ಬಗೆಯ ಪಾಯಸ ಮಾಡಿ ಬೇಜಾರೆನಿಸಿದ್ದರೆ ಈ ಬಾರಿ ಸೌತೆಕಾಯಿಯ ಪಾಯಸ ಮಾಡಿ ರುಚಿ ನೋಡಿ. ಬೇಸಿಗೆಗೆ ಹೇಳಿ ಮಾಡಿಸಿದ ಈ ಖಾದ್ಯವನ್ನು ಹೇಗೆ ಮಾಡುವುದು ಅಂತ ನೀವೂ ತಿಳಿಯಿರಿ.
ಬೇಕಾಗುವ ಸಾಮಾಗ್ರಿಗಳು
2 ಕಪ್ ಹಾಲು
2 ಚಮಚ ಏಲಕ್ಕಿ ಪುಡಿ
8-10 ಹುರಿದ ಗೋಡಂಬಿ
1/2 ಕಪ್ ಸಬ್ಬಕ್ಕಿ
(1ಗಂಟೆ ನೆನೆಸಿರಬೇಕು)
ಬೇಕಾದಷ್ಟು ನೀರು
1/4 ಕಪ್ ಸಕ್ಕರೆ
5 ಚಮಚ ತುಪ್ಪ
4 ಕಪ್ ಸೌತೆಕಾಯಿ ತುಂಡು
(ಸಿಪ್ಪೆ ಸುಲಿದು ಚಿಕ್ಕದಾಗಿ ಹೆಚ್ಚಿರಬೇಕು)
1/2 ಕಪ್ ಮಂದಗೊಳಿಸಿದ ಹಾಲು (ಕಂಡೆನ್ಸ್ಡ್ ಹಾಲು)
ಮಾಡುವ ವಿಧಾನ
ಒಂದು ದಪ್ಪ ತಳದ ಪಾತ್ರಯಲ್ಲಿ ನೆನೆಸಿದ ಸಬ್ಬಕ್ಕಿ ಮತ್ತು ಸೌತೆಕಾಯಿ ತುಂಡುಗಳನ್ನು ಹಾಕಿ ಸ್ವಲ್ಪ ನೀರು ಸೇರಿಸಿ ಬೇಯಿಸಿ. ಬೆಂದ ನಂತರ ಅದರಲ್ಲಿರುವ ನೀರನ್ನು ತೆಗೆದು ಸಕ್ಕರೆ ಸೇರಿಸಿ.
ಸಕ್ಕರೆ ಕರಗಿದ ನಂತರ ಅದಕ್ಕೆ ಮಂದಗೊಳಿಸಿದ ಹಾಲು ಸೇರಿಸಿ ಕಡಿಮೆ ಉರಿಯಲ್ಲಿ 5 ನಿಮಿಷ ಕುದಿಸಿ.
ಅದಕ್ಕೆ ಏಲಕ್ಕಿ ಪುಡಿ ಹಾಕಿ ಮುಚ್ಚಳ ಮುಚ್ಚಿ 2 ನಿಮಿಷ ಕುದಿಸಿ.
ನಂತರ ಅದಕ್ಕೆ ತುಪ್ಪದಲ್ಲಿ ಹುರಿದ ಗೋಡಂಬಿ ಮತ್ತು ತುಪ್ಪವನ್ನು ಹಾಕಿ ಬಿಸಿ ಬಿಸಿಯಾಗಿ ಸೌತೆಕಾಯಿ ಪಾಯಸ ಸವಿಯಲು ನೀಡಿ.