ಆಹಾರ, ಬಟ್ಟೆ, ಮನೆ ಇದು ಮಾನವನಿಗೆ ಅತ್ಯಗತ್ಯ. ಆಹಾರಕ್ಕೆ ಸಂಬಂಧಿಸಿದಂತೆ ಶಾಸ್ತ್ರಗಳಲ್ಲಿ ಅನೇಕ ವಿಷ್ಯಗಳನ್ನು ಹೇಳಲಾಗಿದೆ. ಆಹಾರದ ಬಗ್ಗೆ ಹೇಳಿರುವ ಉಪಾಯಗಳನ್ನು ಅನುಸರಿಸಿದ್ರೆ ನಮ್ಮ ಭಾಗ್ಯದ ಬಾಗಿಲು ತೆರೆಯಲಿದೆ.
ಅಡುಗೆ ಮನೆಯಲ್ಲಿ ಬೆಳಿಗ್ಗೆ ಮೊದಲು ಮಾಡಿದ ರೊಟ್ಟಿಯನ್ನು ನಾಲ್ಕು ಭಾಗಗಳಾಗಿ ಕತ್ತರಿಸಬೇಕು. ಅದಕ್ಕೆ ತುಪ್ಪ, ಸಕ್ಕರೆ, ಬೆಲ್ಲ ಇದ್ರಲ್ಲಿ ಒಂದನ್ನು ಹಾಕಬೇಕು. ಒಂದು ಭಾಗವನ್ನು ದನಕ್ಕೆ, ಇನ್ನೊಂದನ್ನು ನಾಯಿಗೆ ಹಾಕಬೇಕು.
ಮತ್ತೊಂದನ್ನು ಕಾಗೆ ಹಾಗೂ ನಾಲ್ಕನೇ ತುಂಡನ್ನು ಭಿಕ್ಷುಕನಿಗೆ ನೀಡಬೇಕು. ಇದ್ರಿಂದ ಪಿತೃದೋಷ ದೂರವಾಗಲಿದೆ. ಶತ್ರು ಭಯ, ಕಾಳಸರ್ಪದೋಷ, ಆರ್ಥಿಕ ಸಂಕಷ್ಟ ದೂರವಾಗಲಿದೆ.
ಜಾತಕದಲ್ಲಿ ಶನಿ, ರಾಹು-ಕೇತುವಿನ ದೋಷವಿದ್ರೆ ರಾತ್ರಿ ಮಾಡಿದ ಕೊನೆಯ ರೊಟ್ಟಿಗೆ ಸಾಸಿವೆ ಎಣ್ಣೆಯನ್ನು ಹಾಕಿ ಕಪ್ಪು ನಾಯಿಗೆ ನೀಡಬೇಕು. ಇದು ಶನಿ, ರಾಹು-ಕೇತು ದೋಷವನ್ನು ದೂರ ಮಾಡುತ್ತದೆ.
ಅತಿಥಿ ದೇವರು ಎನ್ನಲಾಗುತ್ತದೆ. ಮನೆಗೆ ಬರುವ ಅತಿಥಿ ಅಥವಾ ಭಿಕ್ಷುಕನಿಗೆ ಅವಶ್ಯವಾಗಿ ಆಹಾರವನ್ನು ನೀಡಿ. ಅದ್ರಲ್ಲೂ ರೊಟ್ಟಿಯನ್ನು ಅವಶ್ಯವಾಗಿ ನೀಡಿ.
ಅರ್ಧಕ್ಕೆ ನಿಂತ ಕಾರ್ಯ ಪೂರ್ಣಗೊಳ್ಳಬೇಕೆಂದ್ರೆ ರೊಟ್ಟಿಗೆ ಸಕ್ಕರೆ ಹಾಕಿ ಸಣ್ಣ ಸಣ್ಣ ತುಂಡುಗಳನ್ನು ಮಾಡಿ ಅದನ್ನು ಇರುವೆಗಳಿಗೆ ಹಾಕಿ.
ಮನೆಯಲ್ಲಿ ಸದಾ ಗಲಾಟೆಯಾಗ್ತಿದ್ದು, ನೆಮ್ಮದಿ ಬೇಕೆನ್ನುವವರು ಮಧ್ಯಾಹ್ನ ಮಾಡಿದ ಮೊದಲ ರೊಟ್ಟಿಯನ್ನು ದನಕ್ಕೆ ಹಾಗೂ ಕೊನೆ ರೊಟ್ಟಿಯನ್ನು ನಾಯಿಗೆ ನೀಡಿ. ನೀವು ಆಹಾರ ಸೇವನೆ ಮಾಡುವ ಮೊದಲೇ ದನ, ನಾಯಿಗೆ ರೊಟ್ಟಿ ನೀಡಲು ಪ್ರಯತ್ನಿಸಿ. ಸಾಧ್ಯವಾಗದೆ ಹೋದಲ್ಲಿ ನಂತ್ರ ನೀಡಿ.