ಭಾರತೀಯ ಸಮಾಜದಲ್ಲಿ ಮದುವೆಗೂ ಮೊದಲು ಜಾತಕ ಹೊಂದಿಸುವ ಪದ್ಧತಿಯಿದೆ. ಜಾತಿ, ನಕ್ಷತ್ರ, ಗೋತ್ರ ಎಲ್ಲವೂ ಸರಿ ಬಂದ್ರೆ ದಾಂಪತ್ಯ ಚೆನ್ನಾಗಿರುತ್ತದೆ ಎಂದು ನಂಬಲಾಗಿದೆ.
ಇದೇ ಕಾರಣಕ್ಕೆ ಜಾತಕ ನೋಡಿ ಮದುವೆ ಮಾಡಲಾಗುತ್ತದೆ. ಇದು ಅವರವರ ನಂಬಿಕೆಗೆ ಬಿಟ್ಟಿದ್ದು. ಆದ್ರೆ ಮದುವೆಗೂ ಮುನ್ನ ನವಜೋಡಿ ಮಹತ್ವದ ಕೆಲಸವನ್ನು ಮಾಡಬೇಕು.
ಮದುವೆಗೂ ಮುನ್ನ ಜೋಡಿ ಆಸ್ಪತ್ರೆಗೆ ಭೇಟಿ ನೀಡುವುದು ಅಗತ್ಯ. ಸಂಪೂರ್ಣ ಹೆಲ್ತ್ ಚೆಕಪ್ ಮಾಡಿಸಿಕೊಂಡರೆ ಒಳ್ಳೆಯದು. ಕೆಲವೊಂದು ಖಾಯಿಲೆಗಳು ಸಾಂಕ್ರಾಮಿಕ. ಸಂಗಾತಿಗೆ ಅದು ಹರಡುವ ಜೊತೆಗೆ ಮುಂದಾಗುವ ಮಗುವಿನ ಮೇಲೂ ಪರಿಣಾಮ ಬೀರುತ್ತದೆ.
ಒಬ್ಬರ ಖಾಯಿಲೆ ಇನ್ನೊಬ್ಬರ ಜೀವವನ್ನು ಬಲಿ ಪಡೆಯುವುದು ಸರಿಯಲ್ಲ. ಈ ಕಾರಣಕ್ಕೆ ವಧು-ವರ ಇಬ್ಬರೂ ಹೆಲ್ತ್ ಚೆಕಪ್ ಮಾಡಿಸಿಕೊಂಡರೆ ಒಳ್ಳೆಯದು.
ರಕ್ತಹೀನತೆ, ರಕ್ತದ ಗುಂಪು, ಥೈರಾಯ್ಡ್, ಹೆಪಟೈಟೀಸ್, ಎಸ್ಟಿಡಿ, ಸಿಫಲಿಸ್, ಏಡ್ಸ್, ಸೇರಿದಂತೆ ಅನೇಕ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕಾಗುತ್ತದೆ. ಒಮ್ಮೆ ಆರೋಗ್ಯ ತಪಾಸಣೆಯಾಗಿ ಫಲಿತಾಂಶ ಬಂದ ಮೇಲೆ ಮುಂದಿನ ಪರೀಕ್ಷೆ ಬಗ್ಗೆ ನೀವು ವೈದ್ಯರಲ್ಲಿ ಕೇಳಬಹುದು.