ಆರೋಗ್ಯವಾಗಿರಬೇಕೆಂದ್ರೆ ಹೊಟ್ಟೆಗೆ ಹಿಟ್ಟು ಹೋಗಲೇ ಬೇಕು. ದೇಹಕ್ಕೆ ಶಕ್ತಿ ನೀಡುವ ಆಹಾರಗಳ ಸೇವನೆ ಬಹಳ ಮುಖ್ಯ. ಆದ್ರೆ ಕೆಲವರು ಶುದ್ಧ ಸಸ್ಯಾಹಾರವನ್ನು ಸೇವಿಸ್ತಾರೆ. ಮತ್ತೆ ಕೆಲವರಿಗೆ ಮಾಂಸಾಹಾರವೆಂದರೆ ಇಷ್ಟ. ಕೆಲವೊಂದು ಆಹಾರವನ್ನು ನಾವು ಸಸ್ಯಾಹಾರದ ಗುಂಪಿಗೆ ಸೇರಿಸಿರುತ್ತೇವೆ. ವಾಸ್ತವವಾಗಿ ಅವು ಸಸ್ಯಾಹಾರವಾಗಿರುವುದಿಲ್ಲ.
ಸಾಮಾನ್ಯವಾಗಿ ಬರ್ಗರ್ ಎಂದ್ರೆ ಎಲ್ಲರ ಬಾಯಲ್ಲಿಯೂ ನೀರು ಬರುತ್ತೆ. ಅದನ್ನು ಸಸ್ಯಹಾರದ ಗುಂಪಿಗೆ ಸೇರಿಸಲಾಗಿದೆ. ಆದ್ರೆ ಬರ್ಗರ್ ಜೊತೆ ಸೇವಿಸುವ ಮೇಯನೇಸ್ ಗೆ ಮೊಟ್ಟೆಯನ್ನು ಹಾಕಲಾಗುತ್ತದೆ.
ಕೇಕ್ ಗೆ ಕೂಡ ಮೊಟ್ಟೆಯನ್ನು ಬಳಸಲಾಗುತ್ತದೆ. ಸಂಪೂರ್ಣ ಸಸ್ಯಹಾರಿ ಕೇಕ್ ಕೂಡ ಮಾಡಬಹುದು.
ಕೆಲವೊಂದು ಕೋಲ್ಡ್ ಡ್ರಿಂಕ್ಸ್ ಗೆ ಮೀನಿನ ಎಣ್ಣೆಯನ್ನು ಬಳಸಲಾಗುತ್ತದೆ.
ಸಂಪೂರ್ಣ ಸಸ್ಯಹಾರದ ಪಟ್ಟಿಯಲ್ಲಿ ಚಿಪ್ಸ್ ಕೂಡ ಒಂದು. ಆದ್ರೆ ಇದಕ್ಕೆ ಕೂಡ ಪ್ರಾಣಿಗಳ ಉತ್ಪನ್ನಗಳನ್ನು ಬಳಸಲಾಗುತ್ತದೆ.
ಹಾಗಾಗಿ ಸಸ್ಯಾಹಾರಿ ಎಂದು ನೀವು ಆಹಾರ ಸೇವಿಸುವ ಮುನ್ನ ಅದಕ್ಕೆ ಬಳಸಿದ ವಸ್ತುಗಳ ಬಗ್ಗೆ ಗಮನ ಹರಿಸಿ.