ವಾಸ್ತುವನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿದ್ರೆ ಬಹಳ ಒಳ್ಳೆಯದು. ವಾಸ್ತು ಶಾಸ್ತ್ರದಂತೆ ಮನೆ ನಿರ್ಮಾಣ ಮಾಡಲಾಗುತ್ತದೆ. ಆದ್ರೆ ಮನೆ ನಿರ್ಮಾಣವಾಗುವ ಜಾಗ ಕೂಡ ಬಹಳ ಮುಖ್ಯವಾಗುತ್ತದೆ.
ಜೀವನದಲ್ಲಿ ಒಮ್ಮೆ ದುಡಿದ ಹಣವನ್ನೆಲ್ಲ ಸುರಿದು ಸುಂದರ ಮನೆ ನಿರ್ಮಾಣ ಮಾಡುವವರು ಮೊದಲು ವಾಸ್ತುವನ್ನು ನೋಡಿಯೇ ಜಾಗ ಆಯ್ಕೆ ಮಾಡಿಕೊಂಡರೆ ಒಳ್ಳೆಯದು.
ಇತ್ತೀಚಿನ ದಿನಗಳಲ್ಲಿ ಶಾಂತ ಪ್ರದೇಶದಲ್ಲಿ ಮನೆ ನಿರ್ಮಾಣ ಮಾಡಿ ಶಾಂತವಾಗಿರಲು ಜನರು ಇಷ್ಟಪಡ್ತಾರೆ. ಆದ್ರೆ ವಾಸ್ತು ಶಾಸ್ತ್ರದ ಪ್ರಕಾರ, ಶಾಂತವಾಗಿರುವ ನದಿ ಪ್ರದೇಶದಲ್ಲಿ ಮನೆ ನಿರ್ಮಾಣ ಮಾಡಬಾರದು.
ಅದು ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಈ ಮನೆಯಲ್ಲಿ ಎಂದೂ ಸುಖ ನೆಲೆಸಲು ಸಾಧ್ಯವಿಲ್ಲ. ಮನೆಯಲ್ಲಿ ಸದಾ ದುಃಖ ಮನೆ ಮಾಡಿರುತ್ತದೆ.
ಸ್ಮಶಾನದ ಭೂಮಿಯಲ್ಲಿ ಅಥವಾ ಸ್ಮಶಾನದ ಆಸುಪಾಸು ಮನೆ ನಿರ್ಮಾಣ ಮಾಡುವುದು ಒಳ್ಳೆಯದಲ್ಲ. ಮನೆಯನ್ನು ನಕಾರಾತ್ಮಕ ಶಕ್ತಿ ಪ್ರವೇಶ ಮಾಡುತ್ತದೆ. ಸ್ಮಶಾನದ ಭೂಮಿಯನ್ನು ಖರೀದಿ ಮಾಡಿ ಅಲ್ಲಿ ವಾಸವಾದ್ರೆ ಭೂತ, ಪ್ರೇತದ ಕಾಟವಿರುತ್ತದೆ.
ಇನ್ನು ಆಸ್ಪತ್ರೆ ಸುತ್ತಮುತ್ತಲೂ ಮನೆ ನಿರ್ಮಾಣ ಮಾಡಬಾರದು. ಮನೆಯಲ್ಲಿ ನಕಾರಾತ್ಮಕ ಶಕ್ತಿ ಪ್ರವೇಶವಾಗುತ್ತದೆ. ಆಸ್ಪತ್ರೆ ಸುತ್ತಮುತ್ತ ಮನೆ ನಿರ್ಮಾಣ ಮಾಡಿ ವಾಸವಾದ್ರೆ ಸದಾ ರೋಗ ಕಾಡುತ್ತದೆ. ರೋಗದಿಂದ ಮುಕ್ತಿ ಸಿಗುವುದು ಕಷ್ಟವೆಂದು ಶಾಸ್ತ್ರದಲ್ಲಿ ಹೇಳಲಾಗಿದೆ.