HomeHealthಖಾಸಗಿ ಅಂಗಕ್ಕೆ ಹಾನಿಕರ ಹೇರ್ ರಿಮೂವರ್ ಕ್ರೀಂ

ಖಾಸಗಿ ಅಂಗಕ್ಕೆ ಹಾನಿಕರ ಹೇರ್ ರಿಮೂವರ್ ಕ್ರೀಂ

ದೇಹದ ಪ್ರತಿಯೊಂದು ಅಂಗದ ಸೌಂದರ್ಯಕ್ಕೆ ಜನರು ಮಹತ್ವ ನೀಡ್ತಾರೆ. ಮುಖದ ಜೊತೆ ಕೈ, ಕಾಲು ಸೇರಿದಂತೆ ಖಾಸಗಿ ಅಂಗದ ಸೌಂದರ್ಯಕ್ಕೂ ಹೆಚ್ಚು ಮಹತ್ವ ನೀಡಲಾಗುತ್ತದೆ. ಸಾಮಾನ್ಯವಾಗಿ ಉಳಿದ ಭಾಗಕ್ಕಿಂತ ಖಾಸಗಿ ಅಂಗ ಕಪ್ಪಾಗಿರುತ್ತದೆ. ಖಾಸಗಿ ಅಂಗದ ಸ್ವಚ್ಛತೆ ಬಹಳ ಮುಖ್ಯ.

ಖಾಸಗಿ ಅಂಗದ ಸೌಂದರ್ಯ ಹೆಚ್ಚಿಸಿಕೊಳ್ಳಲು ಜನರು ಹೇರ್ ರಿಮೂವರ್ ಕ್ರೀಂ ಬಳಸ್ತಾರೆ. ಆದ್ರೆ ಈ ಕ್ರೀಂ ನಮ್ಮ ಅಂಗಕ್ಕೆ ಹಾನಿಯುಂಟು ಮಾಡುತ್ತದೆ ಎಂಬುದು ಅನೇಕರಿಗೆ ತಿಳಿದಿಲ್ಲ. ಜೊತೆಗೆ ಖಾಸಗಿ ಅಂಗವನ್ನು ಬಹಳ ನಾಜೂಕಿನಿಂದ ಸ್ವಚ್ಛಗೊಳಿಸಿಕೊಳ್ಳಬೇಕು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೆಲವರು ಖಾಸಗಿ ಅಂಗ ಕಪ್ಪಾಗಿರುವುದಕ್ಕೆ ಬೇಸರಗೊಳ್ತಾರೆ. ಸ್ನಾನ ಮಾಡುವ ವೇಳೆ ಗಟ್ಟಿಯಾಗಿ ಉಜ್ಜುತ್ತಾರೆ. ತಲೆಗೆ ಹಾಕುವ ಶಾಂಪೂ ಬಳಸುವವರೂ ಇದ್ದಾರೆ. ಆದ್ರೆ ಖಾಸಗಿ ಅಂಗಕ್ಕೆ ಸೋಪ್, ಶಾಂಪೂ ಹಾಕಬಾರದು. ಖಾಸಗಿ ಅಂಗ ಸ್ವಚ್ಛಗೊಳಿಸಲು ಮಾರುಕಟ್ಟೆಯಲ್ಲೇ ಶಾಂಪೂ ಸಿಗುತ್ತದೆ. ಪಿಹೆಚ್ ಸಮತೋಲನವಿರುವ ಉತ್ಪನ್ನವನ್ನು ಬಳಸಬೇಕು.

ಹೇರ್ ರಿಮೂವರ್ ಕ್ರೀಂ ಕೂಡ ಖಾಸಗಿ ಅಂಗವನ್ನು ಕಪ್ಪಗೆ ಮಾಡುತ್ತದೆ. ಸದಾ ಹೇರ್ ರಿಮೂವರ್ ಕ್ರೀಂ ಬಳಕೆಯಿಂದ ಖಾಸಗಿ ಅಂಗ ಕಪ್ಪಾಗುತ್ತದೆ.

ಸ್ನಾನದ ನಂತ್ರ ಖಾಸಗಿ ಅಂಗವನ್ನು ಸರಿಯಾಗಿ ಒರೆಸಿಕೊಳ್ಳಿ. ತೇವಾಂಶ ಇರದಂತೆ ನೋಡಿಕೊಳ್ಳಿ. ತೇವಾಂಶವಿದ್ದಾಗಲೆ ಒಳ ಉಡುಪು ಧರಿಸಿದ್ರೆ ಖಾಸಗಿ ಅಂಗ ಕಪ್ಪಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular