HomeLatest Newsಮನೆಯಲ್ಲಿಯೇ ತಯಾರಿಸಿ ರುಚಿಯಾದ ಭೇಲ್ ಪುರಿ ಸ್ಯಾಂಡ್ವಿಚ್

ಮನೆಯಲ್ಲಿಯೇ ತಯಾರಿಸಿ ರುಚಿಯಾದ ಭೇಲ್ ಪುರಿ ಸ್ಯಾಂಡ್ವಿಚ್

ಸಾಮಾನ್ಯವಾಗಿ ಚಾಟ್ ಸ್ಟ್ರೀಟ್ ಗಳಲ್ಲಿ ಲಭ್ಯವಿರೋ ಭೇಲ್ ಪುರಿ ಸ್ಯಾಂಡ್ವಿಚ್ ಮನೆಯಲ್ಲಿ ತಯಾರಿಸಲು ಕೊಂಚ ಕಷ್ಟವೇ ಸರಿ. ಆದ್ರೆ ಕೊಂಚ ತ್ರಾಸ ಎನಿಸಿದರೂ ರುಚಿಕರವಾದ ಭೇಲ್ ಪುರಿ ಸ್ಯಾಂಡ್ವಿಚ್ ಅನ್ನು ಮನೆಯಲ್ಲಿಯೇ ತಯಾರಿಸಬಹುದು.

ಬೇಕಾಗುವ ಸಾಮಗ್ರಿಗಳು: ಮಂಡಕ್ಕಿ ನೂರು ಗ್ರಾಂ, ಈರುಳ್ಳಿ, ಟೊಮ್ಯಾಟೊ (ಚಿಕ್ಕದಾಗಿ ಹೆಚ್ಚಿದ್ದು), ಆಲೂಗಡ್ಡೆ (ಬೇಯಿಸಿ, ಚಿಕ್ಕದಾಗಿ ಹೆಚ್ಚಿದ್ದು), ತುರಿದ ಕ್ಯಾರೆಟ್, ಪುದೀನಾ ಚಟ್ನಿ, ಉಪ್ಪು, ನಿಂಬೆರಸ, ಸೇವ್ ಪುರಿ, ಕೊತ್ತಂಬರಿ ಸೊಪ್ಪು, ಸ್ಯಾಂಡ್ವಿಚ್ ಬ್ರೆಡ್.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪುದೀನಾ ಚಟ್ನಿ ತಯಾರಿಸಲು : ಒಂದು ಕಟ್ಟು ಪುದೀನಾ, ಒಂದು ಕಟ್ಟು ಕೊತ್ತಂಬರಿ ಸೊಪ್ಪು, ಹಸಿಮೆಣಸನ್ನು ನಯವಾಗಿ ಮಿಕ್ಸಿಯಲ್ಲಿ ಅರೆಯಿರಿ. ಅರೆಯುವಾಗ ಕೊಂಚ ನೀರು ಮತ್ತು ಉಪ್ಪನ್ನು ಸೇರಿಸಿ. ಚಟ್ನಿ ತಯಾರಿಸಿದ ಬಳಿಕ ಬದಿಗೆ ತೆಗೆದಿಡಿ. ಬ್ರೆಡ್ ಪೀಸ್ ಗೆ ಸವರಲು ಈ ಚಟ್ನಿಯನ್ನು ಬಳಸಬೇಕು.

 ಮಾಡುವ ವಿಧಾನ : ಒಂದು ಪಾತ್ರೆಯಲ್ಲಿ ಈರುಳ್ಳಿ, ಆಲೂಗಡ್ಡೆ, ಟೊಮ್ಯಾಟೋ, ಕ್ಯಾರೆಟ್ ಮತ್ತು ಮಂಡಕ್ಕಿ ಸೇರಿಸಿ ಚೆನ್ನಾಗಿ ಕಲಸಿ. ಈ ಪಾತ್ರೆಗೆ ಒಂದು ದೊಡ್ಡ ಚಮಚ ಪುದೀನಾ ಚಟ್ನಿ, ನಿಂಬೆರಸ, ಉಪ್ಪು ಸೇರಿಸಿ ಚಮಚ ಬಳಸಿ ಕಲಸಿ. ಇದಕ್ಕೆ ಸೇವ್ ಪುರಿ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಕಲಸಿ. ಈಗ ಸಾಂಡ್ವಿಚ್ ತಯಾರಿಸಲು ಬ್ರೆಡ್‌ ನ ಒಂದು ಭಾಗಕ್ಕೆ (ಅಥವಾ ಬನ್‌ ನ ಒಳಭಾಗ) ಕೊಂಚ ಚಟ್ನಿ ಸವರಿ. ಸವರಿದ ಹೋಳಿನ ಮೇಲೆ ಭೇಲ್ ಪುರಿಯನ್ನು ದಪ್ಪನಾಗಿ ಹರಡಿ. ಈಗ ಇನ್ನೊಂದು ಬ್ರೆಡ್ ನ್ನು ಇದರ ಮೇಲಿರಿಸಿ. ರುಚಿಯಾದ ಭೇಲ್ ಪುರಿ ಸ್ಯಾಂಡ್ವಿಚ್ ಈಗ ತಯಾರಾಗಿದೆ. ಇದನ್ನು ಗ್ರೀನ್ ಚಟ್ನಿಯೊಂದಿಗೆ ಆಸ್ವಾದಿಸಿ.

For Latest News Updates, Join Our Whatsapp Community🚩
RELATED ARTICLES

Most Popular