HomeKarnatakaಭೂ ತಾಯಿಯ ಬಯಕೆ ತೀರಿಸುವ ಹಬ್ಬ ʼಭೂಮಿ ಹುಣ್ಣಿಮೆʼ

ಭೂ ತಾಯಿಯ ಬಯಕೆ ತೀರಿಸುವ ಹಬ್ಬ ʼಭೂಮಿ ಹುಣ್ಣಿಮೆʼ

 

ಮಲೆನಾಡು ಭಾಗದಲ್ಲಿ ಭೂಮಿ ಹುಣ್ಣಿಮೆ ವಿಶೇಷ ಹಬ್ಬವಾಗಿದ್ದು,  ಹೊಲ, ಗದ್ದೆ, ತೋಟಗಳಲ್ಲಿ ಭೂಮಿ ತಾಯಿಗೆ ಪೂಜೆ ಸಲ್ಲಿಸುವ ಮೂಲಕ ರೈತರು ಸಂಭ್ರಮದಿಂದ ಆಚರಿಸುತ್ತಾರೆ.

ಅನ್ನ ನೀಡುವ ಭೂ ತಾಯಿಯನ್ನು ಪೂಜಿಸಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ಈ ಸಂದರ್ಭದಲ್ಲಿ ಗರ್ಭಿಣಿಯಾದ ಭೂಮಿ ತಾಯಿ ಬಯಕೆಯನ್ನು ತೀರಿಸಬೇಕೆಂಬುದು ಈ ಭಾಗದ ಜನರ ನಂಬಿಕೆಯಾಗಿರುತ್ತದೆ. ಅದರಂತೆ ಭೂಮಿ ಹುಣ್ಣಿಮೆಯ ದಿನ ಹೊಲ, ಗದ್ದೆಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಭತ್ತ, ಅಡಿಕೆ ಮೊದಲಾದ ಬೆಳೆಗಳಿಗೆ ಸೀರೆ, ಕುಪ್ಪಸ ತೊಡಿಸಿ ಚಪ್ಪರ ಹಾಕಿ ವಿಶೇಷ ಅಲಂಕಾರ ಮಾಡುವ ಜೊತೆಗೆ ಮನೆ ಮಂದಿಯೆಲ್ಲ ಸೇರಿ ಪೂಜೆ ನೆರವೇರಿಸುತ್ತಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮನೆಯಿಂದ ಸಿದ್ದಪಡಿಸಿಕೊಂಡು ಬಂದಿದ್ದ ಅಡುಗೆ, ತಿನಿಸುಗಳನ್ನು ಇಟ್ಟು ನೈವೇದ್ಯ ಮಾಡಿ ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುತ್ತಾರೆ.

ಪ್ರತಿ ವರ್ಷ ದಸರಾ ನಂತರ ಭೂಮಿ ಹುಣ್ಣಿಮೆಯನ್ನು ಆಚರಿಸಲಾಗುತ್ತದೆ. ಬಯಲು ಸೀಮೆಗಳಲ್ಲಿಯೂ ಸಹ ಭೂಮಿ ಹುಣ್ಣಿಮೆ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಾರೆ. ಎಡೆಯನ್ನು ಭೂಮಿಯೊಳಗೆ ಇಟ್ಟು ಮುಚ್ಚುವ ಮೂಲಕ ನೈವೇದ್ಯ ಮಾಡುತ್ತಾರೆ.

ಭೂ ತಾಯಿ ಇದನ್ನು ಸೇವಿಸುತ್ತಾರೆಂಬ ನಂಬಿಕೆ ರೈತರದ್ದು. ಚರಗವನ್ನು ಚೆಲ್ಲಿ ಇಡೀ ಹೊಲವನ್ನು ರೈತ ಹೆಮ್ಮೆಯಿಂದ ನೋಡುತ್ತಾನೆ. ರೈತರ ಬಹುಮುಖ್ಯವಾದ ಈ ಭೂಮಿ ಹುಣ್ಣಿಮೆ ಹಬ್ಬ ನಾಡಿನ ಅನೇಕ ಭಾಗಗಳಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ.

For Latest News Updates, Join Our Whatsapp Community🚩
RELATED ARTICLES

Most Popular