ಎಲ್ಲ ಕೆಲಸವನ್ನು ಸರಿಯಾಗಿ ಮಾಡಬೇಕೆಂದುಕೊಂಡು ಕಚೇರಿಗೆ ಹೋಗ್ತೇವೆ. ಆದ್ರೆ ಕಚೇರಿಯಲ್ಲಿ ಕೆಲಸ ಮಾಡೋ ಮನಸ್ಸಿರೋದಿಲ್ಲ. ಮುಟ್ಟಿದ್ದೆಲ್ಲ ಹಾಳು ಎನ್ನುವಂತಾಗುತ್ತದೆ. ಇಂಥ ಅನುಭವ ನಿಮಗೂ ಆದ್ರೆ ಮೊದಲು ನೀವು ಕುಳಿತುಕೊಳ್ಳುವ ಜಾಗವನ್ನು ಸರಿಯಾಗಿ ಪರೀಕ್ಷಿಸಿಕೊಳ್ಳಿ. ವಾಸ್ತು ದೋಷ ಕೂಡ ನಿಮ್ಮ ಮನಸ್ಸನ್ನು ಕದಡುತ್ತದೆ.
ನೀವು ಕುಳಿತುಕೊಳ್ಳುವ ಟೇಬಲ್ ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ. ವಾಸ್ತು ಶಾಸ್ತ್ರದ ಪ್ರಕಾರ, ಮೇಜಿನ ಮೇಲೆ ಕಾಗದ, ಫೈಲ್, ವಸ್ತುಗಳು ಹರಡಿಕೊಂಡಿದ್ದರೆ ಅದು ನಿಮ್ಮ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದರೆ ಕೆಲಸದ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ. ಹಾಗಾಗಿ ಮೇಜು ಹಾಗೂ ಕುಳಿತುಕೊಳ್ಳುವ ಜಾಗ ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ. ಬಯಸಿದ್ರೆ ಮೇಜಿನ ಮೇಲೆ ದೇವರ ಫೋಟೋ ಇಡಿ.
ಕಚೇರಿಯಲ್ಲಿ ನೀವು ಕುಳಿತುಕೊಳ್ಳುವ ಜಾಗದಲ್ಲಿ ಗಾಳಿ, ಬೆಳಕು ಸರಿಯಾಗಿ ಬರುವಂತಿರಲಿ. ಕಡಿಮೆ ಬೆಳಕು ಕೂಡ ವಾಸ್ತು ದೋಷಕ್ಕೆ ಕಾರಣವಾಗುತ್ತದೆ.
ಮೇಜಿನ ಮೇಲೆ ಮರ, ಗಿಡ, ಹಕ್ಕಿ ಚಿತ್ರವನ್ನು ಅಂಟಿಸಿ. ಆದ್ರೆ ಮುಳ್ಳಿನ ಗಿಡ, ಅಳುವ ಮಗು, ಒಡೆದ ಕನ್ನಡಿ, ಸಮುದ್ರದ ಅಲೆ ಸೇರಿದಂತೆ ನಕಾರಾತ್ಮಕ ಭಾವನೆ ತುಂಬುವ ಚಿತ್ರ ಹಾಕಬೇಡಿ.