ಭಗವಂತ ಶಿವನಿಗೆ ಪ್ರಿಯವಾದ ಶ್ರಾವಣ ಮಾಸ ಶುರುವಾಗಿದೆ. ಶಿವಪೂಜೆ ವೇಳೆ ಶಿವಲಿಂಗಕ್ಕೆ ನೀರಿನ ಅಭಿಷೇಕ ಮಾಡುವ ಜೊತೆಗೆ ಅರಿಶಿನವನ್ನು ಹಾಕ್ತಾರೆ. ಆದ್ರೆ ಶಿವ ಪೂಜೆಗೆ ಅರಿಶಿನ ಶುಭವಲ್ಲ. ಶಿವ ಪುರುಷನಾದ ಕಾರಣ ಅರಿಶಿನ ಹಾಕಬಾರದೆಂಬ ನಂಬಿಕೆಯಿದೆ.
ಅಭಿಷೇಕ ಮಾಡಿದ ಮೇಲೆ ಅನೇಕರು ಪೂರ್ಣ ಪ್ರಮಾಣದಲ್ಲಿ ಪರಿಕ್ರಮ ಮಾಡ್ತಾರೆ. ಆದ್ರೆ ಎಂದೂ ಪೂರ್ಣ ಪ್ರದಕ್ಷಿಣೆ ಹಾಕಬಾರದು. ಅರ್ಧ ಪರಿಕ್ರಮ ಮಾತ್ರ ಮಾಡಬೇಕು. ಹಾಗಾದಲ್ಲಿ ಮಾತ್ರ ಫಲ ಸಿಗುತ್ತದೆ.
ಶ್ರಾವಣ ಮಾಸದಲ್ಲಿ ಹಾಲಿನ ಸೇವನೆ ಮಾಡಬಾರದು. ಹಾಲು ಕುಡಿಯುವುದ್ರಿಂದ ಪಿತ್ತ ಹೆಚ್ಚಾಗುತ್ತದೆ.
ಶ್ರಾವಣ ಮಾಸದಲ್ಲಿ ಬಿಳಿ ಬದನೆಯನ್ನು ತಿನ್ನಬಾರದು. ಶಾಸ್ತ್ರದಲ್ಲಿ ಬಿಳಿ ಬದನೆ ಅಶುಭ. ಶ್ರಾವಣ ಮಾಸದಲ್ಲಿ ಬದನೆಯಲ್ಲಿ ಹುಳುಗಳು ಹೆಚ್ಚಿರುವ ಕಾರಣ ಅದ್ರ ಸೇವನೆ ಮಾಡಬಾರದು ಎನ್ನುತ್ತದೆ ವಿಜ್ಞಾನ.