HomeLatest Newsಸ್ತನದ ಗಾತ್ರ ಹೆಚ್ಚಿಸಿ ಪರ್ಫೆಕ್ಟ್ ಫಿಗರ್ ಹೊಂದಲು ಇಲ್ಲಿದೆ ಟಿಪ್ಸ್

ಸ್ತನದ ಗಾತ್ರ ಹೆಚ್ಚಿಸಿ ಪರ್ಫೆಕ್ಟ್ ಫಿಗರ್ ಹೊಂದಲು ಇಲ್ಲಿದೆ ಟಿಪ್ಸ್

ಮಹಿಳೆ ಅಂದ್ರೆ ಸೌಂದರ್ಯ. ಮುಖದಿಂದ ಹಿಡಿದು ಇಡೀ ದೇಹದ ಸೌಂದರ್ಯ ವೃದ್ಧಿಗೆ ಮಹಿಳೆ ಮಹತ್ವ ನೀಡ್ತಾಳೆ. ಇದ್ರಲ್ಲಿ ಸ್ತನ ಕೂಡ ಒಂದು. ಸಾಮಾನ್ಯಕ್ಕಿಂತ ಕಡಿಮೆ ಗಾತ್ರದ ಸ್ತನ ಮಹಿಳೆಯರನ್ನು ಮುಜುಗರಕ್ಕೊಳಪಡಿಸುತ್ತದೆ. ಸ್ತನದ ಗಾತ್ರ ಹೆಚ್ಚಿಸಲು ಅನೇಕರು ಶಸ್ತ್ರಚಿಕಿತ್ಸೆ ಮೊರೆ ಹೋಗ್ತಾರೆ. ಆದ್ರೆ ಮನೆಯಲ್ಲಿರುವ ವಸ್ತುಗಳಿಂದಲೇ ಸ್ತನ ಗಾತ್ರವನ್ನು ಹೆಚ್ಚಿಸಿಕೊಳ್ಳಬಹುದು.

ಸ್ತನದ ಗಾತ್ರ ಹೆಚ್ಚಿಸಿಕೊಳ್ಳಲು ಬಯಸುವವರು ಹಾಲು ಹಾಗೂ ಪಪ್ಪಾಯಿ ಹಣ್ಣನ್ನು ಸೇವನೆ ಮಾಡಬೇಕು. ಅಗತ್ಯಕ್ಕೆ ತಕ್ಕಷ್ಟು ಹಾಲು ಹಾಗೂ ಪಪ್ಪಾಯವನ್ನು ಸೇವನೆ ಮಾಡಿ. ಹೆಚ್ಚಿಗೆ ಸೇವನೆ ಮಾಡಿದ್ರೆ ಬೇಧಿ ಕಾಣಿಸಿಕೊಳ್ಳುತ್ತದೆ. ಗರ್ಭಿಣಿಯರು ಪಪ್ಪಾಯ ತಿನ್ನಬಾರದು.

ಪರ್ಫೆಕ್ಟ್ ಫಿಗರ್ ಹಾಗೂ ಸ್ತನದ ಗಾತ್ರ ಬಯಸುವವರು ಅಗಸೆ ಬೀಜದ ಸೇವನೆ ಮಾಡಬಹುದು. ಕೆಲ ದಿನಗಳ ಕಾಲ ಅಗಸೆ ಬೀಜವನ್ನು ಸೇವನೆ ಮಾಡುವುದ್ರಿಂದ ಪರಿಣಾಮ ಕಾಣುತ್ತದೆ. ಸೇವನೆಗಿಂತ ಮೊದಲು ವೈದ್ಯರ ಸಲಹೆ ಪಡೆಯುವುದು ಸೂಕ್ತ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸೋಯಾ ವಸ್ತುಗಳನ್ನು ತಿನ್ನುವುದ್ರಿಂದಲೂ ಸ್ತನದ ಗಾತ್ರ ದೊಡ್ಡದಾಗುತ್ತದೆ. ಸೋಯಾ ಬೀನ್ಸ್ ಅಥವಾ ಸೋಯಾದಿಂದ ಮಾಡಿದ ಆಹಾರವನ್ನು ಸೇವನೆ ಮಾಡಬೇಕು. ಇದನ್ನು ಹೆಚ್ಚು ಸೇವನೆ ಮಾಡುವುದು ಸೂಕ್ತವಲ್ಲ. ಪ್ರಮಾಣ ಹೆಚ್ಚಾದ್ರೆ ಕ್ಯಾನ್ಸರ್ ನಂತಹ ದೊಡ್ಡ ಸಮಸ್ಯೆ ಕಾಡುವ ಸಾಧ್ಯತೆಯಿರುತ್ತದೆ.

ಹಾಲು ಹಾಗೂ ಹಾಲಿನಿಂದ ಮಾಡಿದ ಆಹಾರದಲ್ಲಿ ಕೊಬ್ಬಿನ ಅಂಶ ಹೆಚ್ಚಿರುತ್ತದೆ. ಇದನ್ನು ಹೆಚ್ಚಾಗಿ ಸೇವನೆ ಮಾಡಿದ್ರೆ ಸ್ತನದ ಗಾತ್ರ ಹೆಚ್ಚಾಗುತ್ತದೆ.

ಸ್ತನವನ್ನು ಸರಿಯಾದ ಗಾತ್ರದಲ್ಲಿಟ್ಟುಕೊಳ್ಳಬಯಸುವವರು ಮೆಂತ್ಯದ ಬೀಜವನ್ನು ಸೇವನೆ ಮಾಡಬೇಕು.

ಆಲಿವ್ ಆಯಿಲ್ ಕೂಡ ಸ್ತನದ ಗಾತ್ರ ಹೆಚ್ಚಾಗಲು ನೆರವಾಗುತ್ತದೆ. ಆಲಿವ್ ಆಯಿಲನ್ನು ಸ್ವಲ್ಪ ಬೆಚ್ಚಗೆ ಮಾಡಿ ಸ್ತನಕ್ಕೆ ಹಚ್ಚಿ 20 ನಿಮಿಷಗಳ ಕಾಲ ಮಸಾಜ್ ಮಾಡಬೇಕು.

ಈರುಳ್ಳಿ ರಸ ಹಾಗೂ ಜೇನು ತುಪ್ಪವನ್ನು ಬೆರೆಸಿ ರಾತ್ರಿ ಮಲಗುವ ಮೊದಲು ಸ್ತನಕ್ಕೆ ಹಚ್ಚಿ ಮಸಾಜ್ ಮಾಡಿ. ನಿರಂತರವಾಗಿ ಇದನ್ನು ಮಾಡಿದ್ರೆ ಸ್ತನದ ಗಾತ್ರ ಹೆಚ್ಚಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular