HomeBeautyಚರ್ಮ ಮೃದುಗೊಳಿಸಿ ಸೌಂದರ್ಯ ವರ್ಧಿಸುತ್ತೆ ಕಾಫಿ ಪುಡಿ

ಚರ್ಮ ಮೃದುಗೊಳಿಸಿ ಸೌಂದರ್ಯ ವರ್ಧಿಸುತ್ತೆ ಕಾಫಿ ಪುಡಿ

ಅನೇಕರಿಗೆ ಕಪ್ ಕಾಫಿ ಇಲ್ಲದೆ ದಿನ ಆರಂಭವಾಗೋದಿಲ್ಲ. ಕಾಫಿ ಹುಚ್ಚು ಹತ್ತಿದ್ರೆ ಬಿಡೋದು ಕಷ್ಟ. ಈ ಕಾಫಿ ಕುಡಿಯಲೊಂದೇ ಅಲ್ಲ ಸೌಂದರ್ಯವರ್ಧಕವಾಗಿಯೂ ಕೆಲಸ ಮಾಡುತ್ತದೆ. ಚರ್ಮ, ಕೂದಲಿನ ಸೌಂದರ್ಯವನ್ನು ಕಾಫಿ ಹೆಚ್ಚಿಸುತ್ತದೆ.

ಕಾಫಿ ಪುಡಿಯನ್ನು ನೀರಿನಲ್ಲಿ ನೆನೆಸಿಡಿ. ಕೆಲ ಸಮಯದ ನಂತ್ರ ಬೆವರು ಅತಿ ಹೆಚ್ಚಾಗಿ ಬರುವ ಜಾಗಕ್ಕೆ ಇದನ್ನು ಹಚ್ಚಿ. ಬೆವರಿನ ವಾಸನೆ ಮಂಗಮಾಯವಾಗುತ್ತದೆ.

ಸಕ್ಕರೆ ಹಾಕದೆ ಕಾಫಿ ಪುಡಿಯನ್ನು ನೀರಿಗೆ ಹಾಕಿ ಕುದಿಸಿ. ನಂತ್ರ ಅದನ್ನು ಕಣ್ಣಿನ ಕೆಳಭಾಗದಲ್ಲಿರುವ ಕಪ್ಪು ಕಲೆ ಮೇಲೆ ಹಚ್ಚಿಕೊಳ್ಳಿ. ಕೆಲವೇ ಸಮಯದಲ್ಲಿ ಪರಿಣಾಮ ಕಾಣಬಹುದು. ಇದು ಕಪ್ಪು ಕಲೆ ಜೊತೆ ಕಣ್ಣಿನ ಊತವನ್ನು ಕಡಿಮೆ ಮಾಡುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾಫಿ ಪುಡಿಗೆ ಆಲಿವ್ ಆಯಿಲ್ ಜೊತೆ ಜೇನುತುಪ್ಪ ಬೆರೆಸಿ ಮಿಶ್ರಣ ತಯಾರಿಸಿಕೊಳ್ಳಿ. ಇದನ್ನು ಚರ್ಮಕ್ಕೆ ಹಾಕಿ ಸ್ಕ್ರಬ್ ಮಾಡಿ. ಇದು ಚರ್ಮವನ್ನು ಮೃದುಗೊಳಿಸುತ್ತದೆ. ಆಲಿವ್ ಆಯಿಲ್ ಇಲ್ಲವಾದ್ರೆ ಬೇರೆ ಎಣ್ಣೆಯನ್ನು ಬಳಸಬೇಡಿ. ವಾರದಲ್ಲಿ ಎರಡು ಬಾರಿ ಸ್ಕ್ರಬ್ ಬಳಸಬಹುದು.

ಚರ್ಮ ಎಣ್ಣೆಯುಕ್ತವಾಗಿದ್ದರೆ ಬ್ಲ್ಯಾಕ್ಹೆಡ್ ಗಳು ಹೆಚ್ಚಾಗಿರುತ್ತವೆ. ಮೂಗು ಮತ್ತು ಹಣೆ ಮೇಲೆ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಕಾಫಿಯನ್ನು ಹೆಚ್ಚಾಗಿ ಬಳಸಿದ್ರೆ ಬ್ಲ್ಯಾಕ್ಹೆಡ್ ಗಳು ಕಡಿಮೆಯಾಗುತ್ತವೆ. ಕಾಫಿ ಚರ್ಮದಲ್ಲಿರುವ ಎಣ್ಣೆಯನ್ನು ಕಡಿಮೆ ಮಾಡುತ್ತದೆ. ಮಾಲಿನ್ಯದಿಂದ ಚರ್ಮವನ್ನು ರಕ್ಷಿಸುತ್ತದೆ.

ಕಾಫಿ ಚರ್ಮದ ಜೊತೆ ಕೂದಲಿಗೆ ಬಹಳ ಒಳ್ಳೆಯದು. ಹೊಳಪುಳ್ಳ ಹಾಗೂ ಮೃದು ಕೂದಲಿಗೆ ಕಾಫಿ ಪ್ರಯೋಜನಕಾರಿ. ಒಂದು ದೊಡ್ಡ ಚಮಚ ಕಾಫಿ ಪುಡಿಯನ್ನು ನೀರಿಗೆ ಬೆರೆಸಿ ಆ ನೀರಿನಲ್ಲಿ ಕೂದಲನ್ನು ಸ್ವಚ್ಛಗೊಳಿಸಿಕೊಳ್ಳಿ.

ದಣಿವಾದ ಕಾಲುಗಳಿಗೆ ಕಾಫಿ ಪುಡಿ ವಿಶ್ರಾಂತಿ ನೀಡುತ್ತದೆ. ನೀರಿಗೆ ಕಾಫಿ ಪುಡಿ ಹಾಕಿ ಅದ್ರಲ್ಲಿ ಕಾಲನ್ನಿಟ್ಟು ಕುಳಿತುಕೊಳ್ಳಬೇಕು. ಕಾಲುಗಳು ಸ್ವಚ್ಛವಾಗುವ ಜೊತೆಗೆ ಕಾಲಿನ ದಣಿವನ್ನು ಇದು ನಿವಾರಿಸುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular