ಅನೇಕರಿಗೆ ಕತ್ತಲೆಂದ್ರೆ ಭಯ. ಸಂಪೂರ್ಣ ಕತ್ತಲ ರೂಮಿನಲ್ಲಿ ಮಲಗಿದ್ರೆ ನಿದ್ರೆ ಬರಲ್ಲ ಎನ್ನುವ ಕಾರಣಕ್ಕೆ ಬೆಡ್ ಲೈಟ್ ಹಾಕಿ ಮಲಗ್ತಾರೆ. ಬೆಡ್ ಲೈಟ್ ಇಲ್ಲವೆಂದ್ರೆ ನಿದ್ರೆ ಹತ್ತಿರವೂ ಸುಳಿಯಲ್ಲ ಎನ್ನುವವರಿದ್ದಾರೆ. ಅಂಥವರು ಇಂದಿನಿಂದಲೇ ಲೈಟ್ ಹಾಕಿ ಮಲಗುವ ರೂಢಿ ಬಿಟ್ಟುಬಿಡಿ. ಸಂಶೋಧನೆಯೊಂದು ಆಘಾತಕಾರಿ ಸಂಗತಿಯನ್ನು ಹೇಳಿದೆ.
ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಅಧ್ಯಯನ ಪ್ರಕಾರ, ರಾತ್ರಿ ಲೈಟ್ ಹಾಕಿ ಮಲಗುವುದ್ರಿಂದ ಮಾನಸಿಕ ಹಾಗೂ ಶಾರೀರಿಕ ಸಮಸ್ಯೆ ಉಂಟಾಗುತ್ತದೆಯಂತೆ. ಕ್ಯಾನ್ಸರ್ ನಂತಹ ಕಾಯಿಲೆ ಕಾಡುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಸಂಶೋಧನೆ ಹೇಳಿದೆ.
ಸೂರ್ಯ ಹಾಗೂ ಚಂದ್ರನ ನೈಸರ್ಗಿಕ ಬೆಳಕು ದೇಹ ಹಾಗೂ ಮನಸ್ಸಿಗೆ ಒಳ್ಳೆಯದು. ಆದ್ರೆ ಕೃತಕ ಬೆಳಕು ಜೀವಕ್ಕೆ ಹಾನಿಯುಂಟು ಮಾಡುತ್ತದೆ. ರಾತ್ರಿ ಲೈಟ್ ಹಾಕಿ ಮಲಗಿದ್ರೆ ಅದು ಕ್ಯಾನ್ಸರ್ ಕೋಶವನ್ನು ಸಕ್ರಿಯಗೊಳಿಸುತ್ತದೆ. ಬೆಳಕು ಸ್ತನ ಕ್ಯಾನ್ಸರ್ ಅಪಾಯವನ್ನು ಶೇಕಡಾ 22ರಷ್ಟು ಹೆಚ್ಚಿಸುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.
ಲೈಟ್ ರಾತ್ರಿಯ ಸುಖ ನಿದ್ರೆಯನ್ನು ಹಾಳು ಮಾಡುತ್ತದೆ. ಹೃದಯ ಸಂಬಂಧಿ ಕಾಯಿಲೆಗೆ ಕಾರಣವಾಗುವ ಜೊತೆಗೆ ಮನಸ್ಸಿನ ಮೇಲೂ ಪರಿಣಾಮ ಬೀರುತ್ತದೆ. ಲೈಟ್ ರಕ್ತದೊತ್ತಡದ ಮೇಲೂ ಪರಿಣಾಮ ಬೀರುತ್ತದೆ.